ಕೂಡಗಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ

ಕೂಡಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಮೈರಾಜಪೀರಾ ಜಹಗಿರದಾರ, ತಾನಾಜಿ ನಾಗರಾಳ, ಕಲ್ಲು ದೇಸಾಯಿ ಇತರರಿದ್ದರು.
ಕೂಡಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಮೈರಾಜಪೀರಾ ಜಹಗಿರದಾರ, ತಾನಾಜಿ ನಾಗರಾಳ, ಕಲ್ಲು ದೇಸಾಯಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶಿವಾನಂದ ಪಾಟೀಲ ಭರವಸೆ
  • ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ
ಗೊಳಸಂಗಿ : ದೇಶದೆಲ್ಲೆಡೆ ಖ್ಯಾತಿಗಳಿಸಿರುವ ಈ ಭಾಗದ ರೈತರ ವಿಳ್ಯದೆಲೆ ಮತ್ತು ಈರುಳ್ಳಿ ಖರೀದಿ ಮತ್ತು ಮಾರಾಟಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕೂಡಗಿಯಲ್ಲಿ ನಿರ್ಮಿಸುವ ಚಿಂತನೆಯಿದ್ದು, ಭವಿಷ್ಯದಲ್ಲಿ ಅದನ್ನು ನಿರ್ಮಿಸುವ ಯೋಜನೆಯಿದೆ ಎಂದು ಶಾಸಕ ಶಿವಾನಂದ ಪಾಟೀಲ ಭರವಸೆ ನೀಡಿದರು.
ಕೂಡಗಿ ಗ್ರಾಮದ ಮಾರುತೇಶ್ವರ ದೇವಸ್ಥಾನ ಬಳಿ ಸಮುದಾಯ ಭವನ, ಎಪಿಎಂಸಿ ಬಳಿ ಸಿಸಿ ರಸ್ತೆ, ಕೂಡಗಿ ತಾಂಡಾದ 2 ಕಡೆಗಳಲ್ಲಿ ಸಿಸಿ ರಸ್ತೆ ಸೇರಿ ಒಟ್ಟು 1.75 ಕೋಟಿ ರೂ. ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನ ಎನ್‌ಟಿಪಿಸಿಗಾಗಿ ತಮ್ಮ ಲವತ್ತಾದ ಜಮೀನನ್ನು ಕಳೆದುಕೊಂಡಿದ್ದಾರೆ. ಆದರೆ ಅದಕ್ಕೆ ತಕ್ಕ ಪ್ರತಿಲ ಅವರಿಗೆ ಎನ್‌ಟಿಪಿಸಿ ಇನ್ನೂ ನೀಡಿಲ್ಲ ಎಂದರು. ಕೂಡಗಿ ತಾಂಡಾದಲ್ಲಿ 33 ಕೊಳವೆ ಬಾವಿಗಳಿದ್ದರೂ ಸ್ಥಳೀಯ ನಿವಾಸಿಗರಿಗೆ ಕುಡಿಯುವ ನೀರಿನ ತೊಂದರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಕುಡಿಯುವ ನೀರಿನ ಬಗ್ಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಗಂಗಾಧರಯ್ಯ ಹಿರೇಮಠ ಪೂಜೆ ನೆರವೇರಿಸಿದರು. ಮೈರಾಜಪೀರಾ ಜಹಗಿರದಾರ, ತಾನಾಜಿ ನಾಗರಾಳ, ಕಲ್ಲು ದೇಸಾಯಿ, ರಫೀಕ ಪಕಾಲಿ, ಭರ್ಮಣ್ಣ ಬಿದರಿ, ಶಿವಪ್ಪ ಗುಡದಿನ್ನಿ, ಚಂದ್ರಶೇಖರ ಜುಗತಿ, ಸಂಗನಗೌಡ ಪಾಟೀಲ, ಮಹ್ಮದಆರೀಪ್ ತಾಳಿಕೋಟಿ, ರಾಜು ರಾಠೋಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net