ವೇದಿಕೆ ಶುದ್ಧೀಕರಣಕ್ಕೆ ಸಿಡಿದೆದ್ದ ಕಾಂಗ್ರೆಸ್​

,
,
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರದಲ್ಲಿ ರಸ್ತೆ ಸಂಚಾರ ತಡೆ
  • ಮನುವಾದಿಗಳ ಅಸ್ಪಶ್ಯ ಭಾವಕ್ಕೆ ಆಕ್ರೋಶ
ಚಿತ್ತಾಪುರ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷರಾದ ರಾಜ್ಯಸಭಾ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆ ನಡೆಸಿದ ನಂತರ ಬಿಜೆಪಿ ಮತ್ತು ಆರೆಸ್ಸೆಸ್​ ಪ್ರೋತ್ಸಾಹಿತ ಮನುವಾದಿಗಳು ಗಂಗಾಜಲದಿಂದ ವೇದಿಕೆ ಸ್ಥಳ ಶುದ್ಧೀಕರಿಸಿರುವುದನ್ನು ಖಂಡಿಸಿ ಬ್ಲಾಕ್​ ಕಾಂಗ್ರೆಸ್​ನಿಂದ ಪಟ್ಟಣದ ಲಾಡ್ಜಿಂಗ್​ ಕ್ರಾಸ್​ನಲ್ಲಿ ಮಂಗಳವಾರ ರಸ್ತೆ ಸಂಚಾರ ತಡೆ ಮೂಲಕ ಬೃಹತ್​ ಪ್ರತಿಭಟನೆ ನಡೆಯಿತು.
ವೇದಿಕೆ ಶುದ್ಧೀಕರಿಸಿ ಹಿರಿಯ ದಲಿತ ನಾಯಕನಿಗೆ ಅವಮಾನ ಮಾಡಿದ್ದು ಸಹಿಸಲಾಗದು. ಅಸ್ಪಶ್ಯ ಭಾವದೊಂದಿಗೆ ಶುದ್ಧೀಕರಣ ಮಾಡಿದ ಮತ್ತು ಮಾಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್​ ಅಧ್ಯಕ್ಷ ಮಹೆಮೂದ್​ ಸಾಹೇಬ್​ ಒತ್ತಾಯಿಸಿದರು.
ಹಿರಿಯ ಮುಖಂಡ ಸುರೇಶ್​ ಮೆಂಗನ್​ ಮಾತನಾಡಿ, ಅಯೋಧ್ಯೆ ರಾಮಮಂದಿರ ದೇಣಿಗೆ ಮತ್ತು ಹುಂಡಿಯಲ್ಲಿನ ಹಣ ಬಿಜೆಪಿ ಹಾಗೂ ಆರ್​ಎಸ್​ಎಸ್​ನವರು ಕಳವು ಮಾಡಿ ಮಂದಿರ ಮಲೀನಗೊಳಿಸಿದ್ದಾರೆ. ಅಲ್ಲೂ ಗಂಗಾಜಲದ ಮೂಲಕ ಶುದ್ಧೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಮುಕ್ತಾರ್​ ಪಟೇಲ್​ ಮಾತನಾಡಿ, ದಲಿತ, ಹಿಂದುಳಿದ ನಾಯಕರನ್ನು ಅವಮಾನಿಸುವ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್​ ಮರತೂರ, ರಾಜ್ಯ ಅಪೆಕ್ಸ್​ ಬ್ಯಾಂಕ್​ ನಿರ್ದೇಶಕ ಸುನೀಲ ದೊಡ್ಡಮನಿ, ಪಿಎಲ್​ಡಿ ಬ್ಯಾಂಕ್​ ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ, ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪ್ರಮುಖರಾದ ಚಂದು ಜಾಧವ್​, ಶ್ರೀನಿವಾಸ ಸಗರ, ಶೀಲಾ ಕಾಶಿ, ಬಸವರಾಜ ಹೊಸಳ್ಳಿ, ಬಸವರಾಜ ಚಿನ್ನಮಳ್ಳಿ, ಸೂರ್ಯಕಾಂತ ರದ್ದೆವಾಡಗಿ, ಬಾಬು ಕಾಶಿ, ರಮೇಶ ಹಡಪದ, ನಾಗಯ್ಯ ಗುತ್ತೇದಾರ್​ ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯ ಸಮಿತಿ ಜಿಲ್ಲಾಧ್ಯಕ್ಷ ಜಯಪ್ರಕಾಶ ಕಮಕನೂರ, ಪ್ರಮುಖರಾದ ಶಿವರುದ್ರ ಭೀಣಿ, ಜಗಣ್ಣಗೌಡ ರಾಮತೀರ್ಥ, ವೀರಣ್ಣಗೌಡ ಪರಸರೆಡ್ಡಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್​, ಅರವಿಂದ ಚವ್ಹಾಣ್​, ಚಂದ್ರಶೇಖರ ಕಾಶಿ, ರಾಜಶೇಖರ ತಿಮ್ಮನಾಯಕ, ಯಲ್ಲಾಲಿಂಗ ಮುಗುಟಿ, ದೇವಿಂದ್ರ ಅರಣಕಲ್​, ಶಿವಕುಮಾರ ಯಾಗಾಪುರ, ನಿಂಗಣ್ಣ ಹೇಗಲೇರಿ, ಹಣಮಂತ ಸಂಕನೂರ, ಮಲ್ಲಿಕಾರ್ಜುನ ಕಾಳಗಿ, ಸಿದ್ದುಗೌಡ ಅಫಜಲಪುರಕರ್​, ನಾಗರೆಡ್ಡಿ ಗೋಪಸೇನ್​, ಶಿವಕುಮಾರ ಸುಲ್ತಾನಪುರ, ಜಗದೀಶ ಚವ್ಹಾಣ್​, ಶಿವಕಾಂತ ಬೆಣ್ಣೂರಕರ್​, ದೇವಿಂದ್ರ ಯಾಬಾಳ, ಮನ್ಸೂರ್​ ಪಟೇಲ್​ ತೊಂಚಿ, ಮಲ್ಲಿಕಾರ್ಜುನ ಬೆಣ್ಣೂರಕರ್​, ಶಿವಯ್ಯ ಗುತ್ತೇದಾರ್​, ಈರಪ್ಪ ಬೋವಿ, ರಸೂಲ್​ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ್​, ಶೇಖ ಬಬ್ಲು, ಸಂಜಯ ಬುಳಕರ್​, ವಿಜಯಕುಮಾರ ಚವ್ಹಾಣ್​, ಬಸವರಾಜ ತುಪ್ಪದ, ಮಾಣಿಕ ಅಲ್ಬಾ, ದಶರಥ ಬಂಡಿ ಪಾಲ್ಗೊಂಡಿದ್ದರು.
ಸುಮಾರು ಎರಡು ತಾಸು ನಡೆ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್​ ವಿರುದ್ಧ, ಜಾತಿ ತಾರತಮ್ಯಕ್ಕೆ ಧಿಕ್ಕಾರ ಜತೆ ಟ್ವಿಂಕಲ್​ ಟ್ವಿಂಕಲ್​ ಲಿಟ್ಲ್​ ಸ್ಟಾರ್​, ಸೂಪರ್​ ಸ್ಟಾರ್​ ಮಲ್ಲಿಕಾರ್ಜುನ ರ್ಖಗೆ, ಪ್ರಿಯಾಂಕ್​ ರ್ಖಗೆ ಎಂಬ ಘೋಷಣೆಗಳನ್ನು ಮೊಳಗಿಸಿದ ಪ್ರತಿಭಟನಾಕಾರರು, ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್​ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು. ಡಿವೈಎಸ್​ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಬಂದೋಬಸ್ತ್​ ಮಾಡಲಾಗಿತ್ತು.
"

ದಲಿತ ಸಮುದಾಯದ ಮಹಾ ನಾಯಕ, ಬುದ್ಧ, ಬಸವ, ಅಂಬೇಡ್ಕರ್​ ತತ್ವ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ನಿತ್ಯ ಜೀವನದಲ್ಲಿ ಪಾಲಿಸುತ್ತ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹಗಲಿರುಳು ಹೋರಾಡುತ್ತಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿದ್ದರಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.

— > ಶಿವಾನಂದ ಪಾಟೀಲ್​ ಮರತೂರ ಜಿಪಂ ಮಾಜಿ ಸದಸ್ಯ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net