ಡಾ.ಖರ್ಗೆ ಅವಮಾನಕ್ಕೆ ಕಾಂಗ್ರೆಸ್ ಆಕ್ರೋಶ

ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಮಾತನಡಿದರು. ರಾಜಗೋಪಾಲ್, ಶ್ರೇಣಿಕುಮಾರ ಧೋಕಾ, ಕೃಷ್ಣ ಚಾಪೆಟ್ಲಾ, ನಿರಂಜನ ರೆಡ್ಡಿ, ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಬಸವರಾಜಪ್ಪ ಬಾಗ್ಲಿ, ಖಾಜಾ ಮೈನೋದ್ದೀನ್, ವಿಜಯ ನೀರೆಟಿ ಇತರರಿದ್ದರು.
ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಮಾತನಡಿದರು. ರಾಜಗೋಪಾಲ್, ಶ್ರೇಣಿಕುಮಾರ ಧೋಕಾ, ಕೃಷ್ಣ ಚಾಪೆಟ್ಲಾ, ನಿರಂಜನ ರೆಡ್ಡಿ, ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಬಸವರಾಜಪ್ಪ ಬಾಗ್ಲಿ, ಖಾಜಾ ಮೈನೋದ್ದೀನ್, ವಿಜಯ ನೀರೆಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಮಠಕಲ್-ಸೈದಾಪುರ ಬ್ಲಾಕ್‌ನಿಂದ ಪ್ರತಿಭಟನೆ
  • ಮಾಜಿ ಸಚಿವ ಬಾಬುರಾವ ಚಿಂಚನಸೂರ ಭಾಗಿ
 ಗುರುಮಠಕಲ್: 

ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳ ಸುದ್ಧೀಕರಣ ಮಾಡಿರುವುದು ದೇಶಕ್ಕೆ ಅವಮಾನವಾಗಿದೆ ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುಮಠಕಲ್, ಸೈದಾಪುರ ಬ್ಲಾಕ್ ಕಾಂಗ್ರೆಸ್‌ನಿAದ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಪಕ್ಷದ ಅಸಲಿ ಮುಖವಾಡ ಇದೀಗ ಬಯಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದವರಿಗೆ ದೇಶ ಮುಖ್ಯ ಅಲ್ಲ, ಜಾತಿ ಜಣತಿಗಳ ನಡುವಿನ ತಾರತಮ್ಯ ಮುಖ್ಯ ಅವರು ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಮ್ಮ ನಾಯಕರು ದೇಶದ ಅಭಿವೃದ್ಧಿ ಹೆಸರಿನಲ್ಲಿ ರಾಜಯಕಿ ಮಾಡುತಿದ್ದರೆ ಎಂದರು. ಈ ಘಟನೆಗೆ ಕಾರಣವಾದರವನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಸಾಯಿಬಾಣ್ಣ ಬೋರಾಬಂಡ ಮಾತನಾಡಿ, ಈ ಘಟನೆಯಿಂದ ಬಿಜೆಪಿ ಪಕ್ಷದಿಂದ ಇನ್ನೂ ಅಸ್ಪ್ರಶ್ಯತೆ ಜೀವಂತವಾಗಿದೆ ಎನ್ನುವುದನ್ನು ಸಾಬೀತಾಗಿದೆ ಎಂದರು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮನೆಗಾರ್ ಮಾತನಾಡಿದರು.
ಗುರುಮಠಕಲ್ ಉಸ್ತುವಾರಿ ರಾಜಗೋಪಾಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ಧೋಕಾ, ಗುರುಮಠಕಲ್ ಬ್ಲಾಕ್ ಅಧ್ಯಕ ಕೃಷ್ಣ ಚಾಪೆಟ್ಲಾ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ರೆಡ್ಡಿ, ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಬಸವರಾಜಪ್ಪ ಬಾಗ್ಲಿ, ಖಾಜಾ ಮೈನೋದ್ದೀನ್, ವಿಜಯ ನೀರೆಟಿ, ಚಂದ್ರು ಬಡಿಯಾಳ, ದೇವಪ್ಪ ಗೌಡರಾಚನಳ್ಳಿ, ಮಲ್ಲಮ್ಮ ಕೋಮಾರ್, ಶರಣು ಕಲಾಲ್, ಚಂದ್ರಯ್ಯ ಗುತ್ತೇದಾರ್, ಸೈಯದ್ ಬಾಬಾ, ವಸಂತ ಹಬೀಬ, ಅಶೋಕ ಶನಿವಾರಂ, ಮುರಳಿಧರ, ಯಶವಂತರಾವ ಚೌಧರಿ, ಚಾಂದ ಪಾಶಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net