ಬಡವರ ಆಶಾಕಿರಣ ಕಾಂಗ್ರೆಸ್​ ಸರ್ಕಾರ / HOSAKOTE

ಹೊಸಕೋಟೆಯ ವರದಾಪುರ ವಾರ್ಡ್​ನಲ್ಲಿ ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ ಗುಂಪು ಮನೆ ನಿರ್ಮಿಸಿ ಶಾಸಕ ಶರತ್​ ಬಚ್ಚೇಗೌಡ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ನಗರದ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಬೈರೇಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವ್​ ಮೂರ್ತಿ, ನಿರ್ದೇಶಕ ಡಾ.ಎಚ್​.ಎಂ.ಸುಬ್ಬರಾಜ್​, ದಿ ಟೌನ್​ ಕೋ ಆಪರೇಟಿವ್​ ಬ್ಯಾಂಕ್​ ಅಧ್ಯಕ್ಷ ಬಲ್ಪ್​ ಮಂಜುನಾಥ್​ ಇದ್ದರು.
ಹೊಸಕೋಟೆಯ ವರದಾಪುರ ವಾರ್ಡ್​ನಲ್ಲಿ ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ ಗುಂಪು ಮನೆ ನಿರ್ಮಿಸಿ ಶಾಸಕ ಶರತ್​ ಬಚ್ಚೇಗೌಡ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ನಗರದ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಬೈರೇಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವ್​ ಮೂರ್ತಿ, ನಿರ್ದೇಶಕ ಡಾ.ಎಚ್​.ಎಂ.ಸುಬ್ಬರಾಜ್​, ದಿ ಟೌನ್​ ಕೋ ಆಪರೇಟಿವ್​ ಬ್ಯಾಂಕ್​ ಅಧ್ಯಕ್ಷ ಬಲ್ಪ್​ ಮಂಜುನಾಥ್​ ಇದ್ದರು.
Published on
ಹೊಸಕೋಟೆ : ದೇಶದ ಜನತೆಗೆ ಮೂಲ ಸೌಕರ್ಯ ನೀಡಿ ಬಡತನ ನಿಮೂರ್ಲನೆಗೆ ಪಣತೊಟ್ಟು ಅನ್ನ, ಮನೆ ಹಾಗೂ ಬಟ್ಟೆ ನೀಡಿ ಬಡವರ ಜೀವನದಲ್ಲಿ ಆಶಾಕಿರಣ ಮೂಡಿಸಿರುವುದು ಕಾಂಗ್ರೆಸ್​ ಸರ್ಕಾರ ಎಂದು ಶಾಸಕ ಶರತ್​ ಬಚ್ಚೇಗೌಡ ಬಣ್ಣಿಸಿದರು.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ ಕೊಳಚೆ ನಿಮೂರ್ಲನಾ ಇಲಾಖೆಯಿಂದ ನಗರದ ವರದಪುರ ವಾರ್ಡ್​ನಲ್ಲಿ 10 ಗುಂಟೆ ಜಾಗದಲ್ಲಿ ನಿರ್ಮಿಸಿದ 45 ಗುಂಪು ಮನೆಗಳನ್ನು ಶನಿವಾರ ಬಡವರಿಗೆ ವಿತರಿಸಿ ಮಾತನಾಡಿದರು.
ಕಾಂಗ್ರೆಸ್​ ಗ್ಯಾರಂಟಿ ಯೋಜನೆ ನೀಡಿ ಬಡವರ ಜೀವನಕ್ಕೆ ಆಸರೆಯಾಗಿದೆ. ವಿಪಕ್ಷದವರು ಗ್ಯಾರಂಟಿ ಭಾಗ್ಯ ನೀಡಿ ಕಾಂಗ್ರೆಸ್​ ದಿವಾಳಿಯಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಕೋಟ್ಯಂತರ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳಿಂದ ಅಭಿವೃದ್ಧಿ ಹೊಂದಿದ ತಾಲೂಕಾಗಿ ಬದಲಾಗುತ್ತಿದೆ. ಒಂದು ಮನೆ ನಿಮಾರ್ಣಕ್ಕೆ 7.55 ಲಕ್ಷ ರೂ. ವೆಚ್ಚವಾಗಲಿದ್ದು, ಅದರಲ್ಲಿ 5 ಲಕ್ಷ ರೂ. ರಾಜ್ಯ ಸರ್ಕಾರ ನೀಡುತ್ತದೆ. ಸಂತ್ರಸ್ತರು ಒಂದು ಲಕ್ಷ ನೀಡಬೇಕಿದೆ. ಕೇಂದ್ರ ಸರ್ಕಾರ 1.5 ಲಕ್ಷ ರೂ. ನೀಡಿ, ಅದರಲ್ಲಿ ಶೇ.18 ಜಿಎಸ್​ಟಿ ತೆರಿಗೆ ಎಂದು 1.35 ಲಕ್ಷ ವಾಪಸ್​ ಪಡೆದರೆ ಕೇಂದ್ರದ ಪಾಲು ಕೇವಲ 15 ಸಾವಿರ ರೂಪಾಯಿ. ಈ ಮೊತ್ತ ಬಣ್ಣಕ್ಕೆ ಸರಿಹೋಗಬಹುದು. ಆದರೂ ಪ್ರಧಾನ ಮಂತ್ರಿ ಆವಾಸ್​ ಯೋಜನೆ ಎಂದು ಹೆಸರಿಡಲಾಗಿದೆ ಎಂದರು.
ರಾಜ್ಯ ಸರ್ಕಾರ ಮನೆ ನಿಮಾರ್ಣಕ್ಕೆ ಹೆಚ್ಚು ಪಾಲು ನೀಡುತ್ತಿದ್ದು, ನಿಮಾರ್ಣಗೊಂಡ ಮನೆಗೆ ವಿದ್ಯುತ್​, ನೀರು, ರಸ್ತೆ, ಮೋರಿ ಸೇರಿ ಮೂಲ ಸೌಕರ್ಯ ಒದಗಿಸುವುದರಿಂದ ಯೋಜನೆಯ ಹೆಸರನ್ನು ಸಿದ್ದರಾಮಯ್ಯ ಆವಾಸ್​ ಯೋಜನೆ ಎಂದು ಬದಲಿಸಬೇಕು ಎಂದರು. ಉಪಾಧ್ಯಕ್ಷ ಅಕ್ಬರ್​ ಪಾಷಾ, ಸದಸ್ಯರಾದ ಎಚ್​.ಎಸ್​.ಗೋಪಾಲ್​, ಮುರಳಿ, ನಗರಸಭೆ ಆಯುಕ್ತ ನೀಲಾಲೋಚನ ಪ್ರಭು, ಟಿಎಪಿಸಿಎಂಎಸ್​ ನಿರ್ದೇಶಕರಾದ ಪಾರ್ವತಮ್ಮ, ರವಿ, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಅಂಜು ಇತರರು ಇದ್ದರು.
ತಾಲೂಕು ಅಭಿವೃದ್ಧಿ : ಕಾಂಗ್ರೆಸ್​ ಸರ್ಕಾರ ಬಂದ ನಂತರ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2000 ಮನೆಗಳನ್ನು ವಿತರಣೆ ಮಾಡಲಾಗಿದೆ. ಕೊಳಚೆ ನಿಮೂರ್ಲನಾ ಮಂಡಳಿಯಿಂದ 494 ಮನೆ ನಿಮಾರ್ಣಕ್ಕೆ ಈಗಾಗಲೇ ಯೋಜನೆ ಜಾರಿಯಾಗಿದ್ದು, ಮೊದಲ ಹಂತದಲ್ಲಿ 45 ಮನೆಗಳನ್ನು ವಿತರಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ನಗರದ ಸಂತೆ ವೃತ್ತದಿಂದ ಮಾಲೂರಿಗೆ ಈ ಮೊದಲು ರಸ್ತೆ ಅಭಿವೃದ್ಧಿ ಮಾಡಲಾಗಿದ್ದು, ಕಳಪೆಯಾಗಿದೆ. ರಸ್ತೆ ಗುಂಡಿ ಮುಚ್ಚಲು ಈ ವರೆಗೆ 10 ಕೋಟಿ ರೂ. ಖರ್ಚು ಮಾಡಲಾಗಿದೆ. ಶ್ರೀ 800 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್​ ರಸ್ತೆ ನಿಮಾರ್ಣ ಮಾಡಲಾಗುವುದು. ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸಿದ್ಧವಾಗುತ್ತಿದೆ. ವರದಾಪುರಕ್ಕೆ ನೂತನ ರಸ್ತೆ ಮಾಡಿಕೊಡಲಾಗಿದೆ. ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ಅನುಗೊಂಡನಹಳ್ಳಿ ಹೋಬಳಿ ಭಾಗದಲ್ಲಿ 15 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ತಾಲೂಕು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net