

ಪ್ರಮುಖ ಮುಖ್ಯಾಂಶಗಳು
ಮಹದೇವಪುರ: ನೂತನವಾಗಿರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವಎಐಸಿಸಿ ಕಾರ್ಯದರ್ಶಿ ಮನ್ಸೂರ್ಅಲಿಖಾನ್ ಅವರನ್ನು ಹೆಚ್‌ಎಸ್‌ಆರ್ಲೇಔಟ್ ನಿವಾಸದಲ್ಲಿ ಮಹದೇವಪುರಕ್ಷೇತ್ರ ಕಾಂಗ್ರೆಸ್ ಕಾರ್ತಕರ್ತರುಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನಸ್ವೀಕರಿಸಿ ಮಾತನಾಡಿದ ಮನ್ಸೂರ್ಅಲಿಖಾನ್,ಕಾಂಗ್ರೆಸ್ಪಕ್ಷದ ಹಿರಿಯ ನಾಯಕರು ನನ್ನ ಮೇಲೆಭರವಸೆಯಿಟ್ಟು ರಾಜ್ಯಸಭಾ ಸದಸ್ಯರಾಗಿಆಯ್ಕೆ ಮಾಡಿದ್ದು,ಕೇಂದ್ರ ಹಾಗೂರಾಜ್ಯದ ಎಲ್ಲ ನಾಯಕರಿಗೆ ಧನ್ಯವಾದತಿಳಿಸಿದರು.ರಾಜ್ಯಸಭೆಯಲ್ಲಿಕನ್ನಡಿಗರ ಗಟ್ಟಿ ಧ್ವನಿಯಾಗಿರಾಜ್ಯದ ಅಭಿವೃದ್ಧಿಗೆ ಶಕ್ತಿಮೀರಿ ಕಾರ್ಯನಿರ್ವಹಿಸುವುದಾಗಇದೇ ವೇಳೆ ಭರವಸೆ ನೀಡಿದರು.
ಕೆಪಿಸಿಸಿಸದಸ್ಯ ಜಯರಾಮರೆಡ್ಡಿ ಮಾತನಾಡಿ,ಬೆಂಗಳೂರು ಕೇಂದ್ರಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್ ರಾಜ್ಯದಿಂದರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದುಮಹದೇವಪುರ ಕ್ಷೇತ್ರದ ಕಾಂಗ್ರೆಸ್ಸಂಘಟನೆಗೆ ಮತ್ತಷ್ಟು ಶಕ್ತಿಬಂದಿದೆ. ಅವರನೇತೃತ್ವದಲ್ಲಿ ಜಿಬಿಎ ಚುನಾವಣೆಎದುರಿಸಿ ಹೆಚ್ಚಿನ ಸ್ಥಾನಗಳನ್ನುಗೆಲ್ಲುವುದಾಗಿ ತಿಳಿಸಿದರು.
ರಾಜ್ಯರೆಡ್ಡಿ ಜನಸಂಘದ ನಿರ್ದೇಶಕಎಂ.ಎ.ಕೃಷ್ಣಾರೆಡ್ಡಿಮಾತನಾಡಿ, ತೆಲಂಗಾಣಹಾಗೂ ಕೇರಳ ರಾಜ್ಯಗಳ ಉಸ್ತುವಾರಿಜವಾಬ್ದಾರಿ ಹೊತ್ತು ಯಶಸ್ವಿಯಾಗಿಕಾಂಗ್ರೆಸ್ ಸರ್ಕಾರ ರಚಿಸಲುಶ್ರಮಿಸಿದ ಮನ್ಸೂರ್ ಅಲಿಖಾನ್ಅವರಿಗೆ ರಾಜ್ಯಸಭಾ ಸದಸ್ಯರಾಗಿಕಾಂಗ್ರೆಸ್ ಹೈಕಮಾಂಡ್ ಆಯ್ಕೆಮಾಡಿರುವುದು ಅವರ ಶ್ರಮಕ್ಕೆಸಿಕ್ಕ ಪ್ರತಿಫಲ ಎಂದು ತಿಳಿಸಿದರು.
ಈಸಂದರ್ಭದಲ್ಲಿ ಮಾಜಿ ಸಚಿವರಾದಹೆಚ್.ನಾಗೇಶ,ಮಾಜಿ ಬಿಬಿಎಂಪಿಸದಸ್ಯ ಎಸ್. ಉದಯಕುಮಾರ್, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಮಯಾಂಕ್ಬಾಬು, ಮುಳ್ಳೂರುಶ್ರೀನಿವಾಸ್ ರೆಡ್ಡಿ,ಕಣ್ಣೂರುನಾರಾಯಣಸ್ವಾಮಿ,ಭೂ ನ್ಯಾಯ ಮಂಡಲಿಸದಸ್ಯ ವರುಣ್,ಮುಖಂಡರಾದಗುಂಜೂರುಪಾಳ್ಯ ಆರ್.ರಾಮಕೃಷ್ಣಪ್ಪ,ಎಂಸಿಸಿ ರವಿ, ಗುಂಜೂರು ಬಸವರಾಜ್, ಬಾಬುಗೌಡ,ವರ್ತೂರು ಸುನೀಲ್,ಮಧುರನಗರ ನಾಗೇಶ್, ಚಂದ್ರಾರೆಡ್ಡಿ,ಸುರೇಶ್ ಹಾಗೂಪಕ್ಷದ ಕಾರ್ಯಕರ್ತರು ಶುಭಾಶಯಕೋರಿದರು.