ಕವಿತೆ ಮೂಲಕ ಜಾತಿ ಪದ್ಧತಿ ಖಂಡನೆ caste system

ಕವಿತೆ ಮೂಲಕ ಜಾತಿ ಪದ್ಧತಿ ಖಂಡನೆ caste system
ಕವಿತೆ ಮೂಲಕ ಜಾತಿ ಪದ್ಧತಿ ಖಂಡನೆ caste system
Published on
ಮುಳಬಾಗಿಲು: ತಾಲೂಕಿನ ರೆಡ್ಡಿ ಜನಸಂಘಕ್ಕೆ 2 ಎಕರೆ ಜಮೀನು ಹಾಗೂ 25 ಲಕ್ಷ ರೂ. ಶಾಸಕರ ಅನುದಾನದಲ್ಲಿ ನೀಡಲಾಗುವುದು. ಸಮುದಾಯಕ್ಕೆ ವಿದ್ಯಾರ್ಥಿ ನಿಲಯ ಸೇರಿ ವಿವಿಧ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲು ರೆಡ್ಡಿ ಸಮುದಾಯ ಮುಂದಾಗಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು. caste system
ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ವೇಮನ ಜಯಂತಿಯಲ್ಲಿ ಮಾತನಾಡಿ, ವೇಮನ 15ನೇ ಶತಮಾನದಲ್ಲಿ ಜೀವಿಸಿದ್ದು, ತೆಲುಗಿನ ಶ್ರೇಷ್ಠ ಕವಿ ಮತ್ತು ಯೋಗಿ ಆಗಿದ್ದರು. ಅವರು ತಮ್ಮ ಕವಿತೆಗಳಲ್ಲಿ ಸಮಾನತೆ ಮೂಡಿಸಲು ಪ್ರಯತ್ನಿಸಿದರು. ಅವರ ಆದರ್ಶಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ತಾಲೂಕು ರೆಡ್ಡಿ ಜನಸಂಘದ ಕೋಶಾಧ್ಯಕ್ಷ ಹೈದ್ಲಾಪುರ ಜೈರಾಮರೆಡ್ಡಿ ಮಾತನಾಡಿ, 15ನೇ ಶತಮಾನದಲ್ಲಿ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕಟಪಡಿ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ವೇಮನ ರೆಡ್ಡಿ ಕವಿತೆ ಬೆರೆಯುವ ಮೂಲಕ ಜಾತಿ ಪದ್ಧತಿ ಖಂಡಿಸಿದರು ಎಂದರು.
ಜೈವಿಕ ಇಂಧನ ಮಂಡಳಿ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ರಾಮಲಿಂಗಾರೆಡ್ಡಿ ಮಾತನಾಡಿ, ವೇಮನರೆಡ್ಡಿ ಜಯಂತಿಯನ್ನು ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರಲಾಯಿತು ಎಂದು ಹೇಳಿದರು.
ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಕೆ.ಎಂ.ವೆಂಕಟರಾಮರೆಡ್ಡಿ, ಎಮ್ಮೆನತ್ತ ಗ್ರಾಪಂ ಮಾಜಿ ಅಧ್ಯಕ್ಷ ಕೆ.ನಾಗರಾಜರೆಡ್ಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net