ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಶ್ರೀಕಾಂತ ನವಲಗುಂದ, ಬಸವರಾಜು, ಶಿವಶಂಕರ್, ಕೃಷ್ಣ ಇತರರು ಇದ್ದರು.
ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಶ್ರೀಕಾಂತ ನವಲಗುಂದ, ಬಸವರಾಜು, ಶಿವಶಂಕರ್, ಕೃಷ್ಣ ಇತರರು ಇದ್ದರು.
Published on
ಅರಸೀಕೆರೆ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದುಪರ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ನಗರದ ಪ್ರವಾಸಿ ಮಂದಿರದ ಆವರಣದಿಂದ ಕೇಸರಿ ಬಾವುಟ, ಬ್ಯಾನರ್, ಭಿತ್ತಿಪತ್ರ ಹಿಡಿದು ಡಿಎಂ ಕುರ್ಕೆ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮರವಣಿಗೆ ನಡೆಸಿದರು.

ಹೊರಹಾಕಿ, ಹೊರಹಾಕಿ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕಿ, ಹಿಂದುಗಳ ಹತ್ಯೆ ಮಾಡುತ್ತಿರುವ ಬಾಂಗ್ಲಾದೇಶಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ಯಳನಡು ಮಹಾಸಂಸ್ಥಾನದ ಜ್ಞಾನಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶತಮಾನಗಳ ಇತಿಹಾಸ ಹೊಂದಿರುವ ಹಿಂದು ಧರ್ಮ ಹಾಗೂ ಧರ್ಮೀಯರನ್ನು ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಕೆಲವರು ವಲಸಿಗರ ರೂಪದಲ್ಲಿ ಬಂದು ಅಕ್ರಮವಾಗಿ ನೆಲೆಯೂರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇನ್ನೊಂದು ಕಡೆ ಬಾಂಗ್ಲಾದೇಶದಲ್ಲಿ ಹಿಂದುಗಳ ನರಮೇಧ ನಡೆಯುತ್ತಿದ್ದು, ದೇಶದ ಹೊರಗೆ ಒಳಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಂಘಟಿತರಾಗದೆ ಅನ್ಯ ಮಾರ್ಗವಿಲ್ಲ ಎಂಬುದನ್ನು ಮರೆಯಬಾರದು ಎಂದರು.

ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ್ ನವಲಗುಂದ ಮಾತನಾಡಿ, ದೇಶ ಹಾಗೂ ದೇಶವಾಸಿಗಳಿಗೆ ಸಂಕಷ್ಟ ಎದುರಾದಾಗ ಎದೆಗುಂದದೆ ಹೋರಾಟ ನಡೆಸಲು ಹಿಂಜರಿಯಬಾರದು ಎಂದರು. ಮುಖಂಡರಾದ ಜಿವಿಟಿ ಬಸವರಾಜ್, ನಿವೃತ್ತ ಸೈನಿಕ ನವೀನ್ ಕುಮಾರ್, ಕೃಷ್ಣ ,ಟಿ.ವಿ.ಅರುಣ್ ಕುಮಾರ್ ಇತರರು ಇದ್ದರು.

ಪ್ರತಿಭಟನಾಕಾರರು ಗ್ರೇಡ್ ತಹಸೀಲ್ದಾರ -2 ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಯು ಸಾಗಿ ಪಿ.ಪಿ.ವೃತ್ತದಲ್ಲಿ ಸೇರುವುದರ ಮೂಲಕ ಕೇಸರಿ ಧ್ವಜಗಳೊಂದಿಗೆ ನೂರಾರು ಮಹಿಳೆಯರು, ಪುರುಷರು, ಯುವಕರು ಬಾಂಗ್ಲಾ ದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆವಿಎನ್ ಶಿವು, ಶಿವಶಂಕರ್, ಸುಬ್ರಹ್ಮಣಿ, ವಾಸು, ಎಲೆ ದರ್ಶನ್ , ನಿಖಿಲ್, ಖುಷಿಬಾಬು, ಚಂದ್ರು, ಶಿವನ್ ರಾಜ್, ಲತಾ ರಾಜೇಶ್, ಮಯೂರ ನಾಗೇಶ್, ಸುಮಿತ್ರಾ, ವಿಮಲಾ, ಮೀನ ಕೃಷ್ಣ ಇತರರು ಇದ್ದರು. ಕೆಲವು ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಒದಗಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net