ಕುಣಿಗಲ್: ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಗಣಕಯಂತ್ರ ಆವರಿಸಿದ್ದು, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲ್ಲೇ ಕಂಪ್ಯೂಟರ್ ಕೌಶಲ ಬೆಳೆಸುವುದು ಅಗತ್ಯವಾಗಿದೆ ಎಂದು ರೆಟ್ಜಲ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಪ್ಯಾಟ್ರಿಸ್ ಜನವರಿನ್ ಹೇಳಿದರು.
ತಾಲೂಕು ಯಲಿಯೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ರೆಟ್ಜಲ್ ಇಂಡಿಯಾ ಸಂಸ್ಥೆಯ ಸಿಎಸ್ಆರ್ ಯೋಜನೆಯಡಿ 5 ಗಣಕಯಂತ್ರಗಳನ್ನು ಕೊಡುಗೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಯೋಜನೆಗಳು ಹೆಚ್ಚಾಗಲಿದೆ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಜತೆಗೆ ಕಂಪ್ಯೂಟರ್ ಜ್ಞಾನ ಬೆಳೆಸುವ ಕೆಲಸವನ್ನು ಮಾಡಬೇಕಿದೆ. ವಿದ್ಯಾರ್ಥಿಗಳು ಗಣಕಯಂತ್ರಗಳ ಸೌಲಭ್ಯವನ್ನು ಪಡೆದುಕೊಂಡು ಬೌದ್ಧಿಕ ಮೌಲ್ಯ ಹೆಚ್ಚಿಸಿಕೊಳ್ಳಿ ಎಂದರು.
ತಾಂತ್ರಿಕತೆ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ರಂಗರಾಜು ಮಾತನಾಡಿ, ಹಿಂದೆಲ್ಲಾ ಕಂಪ್ಯೂಟರ್ ಶಿಕ್ಷಣ ಎಂದರೆ ಪದವಿಯ ನಂತರವೇ ಸಿಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದು ಅದರ ಕುರಿತಾದ ಶಿಣ ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.
ಮುಖ್ಯಶಿಕ ಸೀನಯ್ಯ, ಸಿಆರ್ಪಿ ಶಶಿಕಲಾ, ಶಿಣ ಸಂಯೋಜಕ ಸೋಮಶೇಖರ್, ರೆಟ್ಜಲ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಪ್ರತಿಮಾ, ಉಪಾಧ್ಯ ಸಂಜೀವ್.ಆರ್.ಪಾಟೀಲ್, ಸಂಪನ್ಮೂಲ ಅಧಿಕಾರಿ ಮೋಹನ್ಕುಮಾರ್, ವ್ಯವಸ್ಥಾಪಕ ರಂಗರಾಜು, ಮುಖಂಡರಾದ ಬಸವಕುಮಾರ್, ಮಲ್ಲೇಶ್ವರರಾಮ್, ಸೋಮಶೇಖರ್ ಇತರರಿದ್ದರು.