ಅನುಮೋದಿತ ಕಾಮಗಾರಿ ಶ್ರೀಪೂರ್ಣಗೊಳಿಸಿ

Complete the approved work.
Complete the approved work.
Published on
ಪಾವಗಡ: ವಿವಿಧ ಇಲಾಖೆಗಳಲ್ಲಿ ಅನುಮೋದಿತ ಕಾಮಗಾರಿಗಳನ್ನು ಅಧಿಕಾರಿಗಳು ಶ್ರೀವಾಗಿ ಗುತ್ತಿಗೆದಾರರಿಂದ ಪೂರ್ಣಗೊಳಿಸುವಂತೆ ಪಾವಗಡ ಶಾಸಕ ಸೂಚಿಸಿದರು.\
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 3ನೇ ತ್ರೈವಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾತನಾಡಿ, ಕೆಲವು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳ ವಿಳಂಬ ಮತ್ತು ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ವಾಹಿತಿ ಪಡೆದು ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಂಚಾಯತ್ ರಾಜ್ ಲೋಕೋಪಯೋಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೆಡಿಲ್ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು, ಮತ್ತು ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಶ್ರೀದಲ್ಲೇ ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರತಿ ಗ್ರಾಮಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ವಾರಾಟ ವಾಡುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ವಹಿಸಿ ಚಿಲ್ಲರೆ ಅಂಗಡಿಗಳಿಗೆ ಯಾರು ಮದ್ಯ ಪೂರೈಸುತ್ತಾರಯೋ ಅಂತಹ ಅಂಗಡಿಗಳಿಗೆ ದಂಡವನ್ನು ವಿಧಿಸಿ ಅನುಮತಿ ರದ್ದುಗೊಳಿಸಬೇಕೆಂದು ಅಬಕಾರಿ ಇಲಾಖೆಯ ವೃತ್ತ ನಿರೀಕ್ಷಕ ಮೈಕಲ್ ಜಾರ್ಜ್‌ಗೆ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯ ಸಮಯದಲ್ಲಿ ನರ್ಸ್‌ಗಳು ಹಣ ಪಡೆಯುತ್ತಿದ್ದಾರೆಂಬ ದೂರುಗಳು ಬರುತ್ತಿರುವ ಬಗ್ಗೆ ಟಿಎಚ್‌ಒ ನಾಗೇಶ್ ಅವರನ್ನು ಪ್ರಶ್ನಿಸಿ, ವಾಹಿತಿ ಪಡೆದು ಯಾರು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೋ ಅಂತಹ ನರ್ಸ್‌ಗಳಿಗೆ ನೋಟಿಸ್ ನೀಡಿ ತಕ್ಷಣವೇ ಅವಾನತು ವಾಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಈಶ್ವರಪ್ಪ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.
ಸಹಾಯಕ ನಿರ್ದೇಶಕ ವಾರುತಿ ಪ್ರಸಾದ್, ಪಿಡಬ್ಲ್ಯಡಿ ಚೇತನ್, ಕೃಷಿ ಇಲಾಖೆ ಅಜಯ್ ಕುವಾರ, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ, ಸಿಡಿಪಿಒ ಸುನಿತಾ, ಕುಡಿಯುವ ನೀರು ಇಲಾಖೆ ಬಸವಲಿಂಗಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net