ಕಲಬುರಗಿ: ಬೆಂಗಳೂರಿನ ಆರ್.ಎಲ್.ಜಾಲಪ್ಪ ಅಕಾಡೆಮಿಯು ಕೆಎಎಸ್, ಪಿಎಸ್ಐ, ಎಫ್ಡಿಎ, ಎಸ್ಡಿಎ ಸ್ಪರ್ಧಾತ್ಮಕ ಪರೀಕ್ಷೆಗೆ ಪದವೀಧರ ಬಡ, ಗ್ರಾಮೀಣ ಯುವಕ, ಯುವತಿಯರಿಗೆ ಮಾರ್ಚ್ 1ರಿಂದ ನಾಲ್ಕು ತಿಂಗಳ ಉಚಿತ ತರಬೇತಿ ಆಯೋಜಿಸಿದೆ.
ಆಸಕ್ತರು www.rljacademy.in ವೆಬ್ಸೈಟ್ನಲ್ಲಿ ಫೆಬ್ರವರಿ 25ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಇರಲಿದೆ. ಹೆಚ್ಚಿನ ಮಾಹಿತಿಗೆ ಮೊ.9900606042/9731480759ಗೆ ಸಂಪರ್ಕಿಸಲು ಅಕಾಡೆಮಿ ಕಾರ್ಯದರ್ಶಿ ಲಕ್ಷ್ಮಣ ಕೊಡಸೆ ಕೋರಿದ್ದಾರೆ.