ಸಿಡಿಲಿಗೆ ಬಲಿ, ಕುಟುಂಬಸ್ಥರಿಗೆ ಪರಿಹಾರ ವಿತರಣೆ

ಸೇಡಂ ತಾಲೂಕಿನ ಜಾಕನಪಲ್ಲಿಯಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಆಶಪ್ಪನವರ ಮನೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಭೇಟಿ ನೀಡಿ ಪರಿಹಾರದ ಆದೇಶಪ್ರತಿಯನ್ನು ಕುಟುಂಬಸ್ಥರಿಗೆ ನೀಡಿದರು. ಶ್ರೀಯಾಂಕಾ ಧನಶ್ರೀ, ಶರಣಗೌಡ ಪಾಟೀಲ್​, ಮಲ್ಲಿಕಾರ್ಜುನರೆಡ್ಡಿ, ರವೀಂದ್ರ ನಂದಿಗಾಮ ಇದ್ದರು.
ಸೇಡಂ ತಾಲೂಕಿನ ಜಾಕನಪಲ್ಲಿಯಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಆಶಪ್ಪನವರ ಮನೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಭೇಟಿ ನೀಡಿ ಪರಿಹಾರದ ಆದೇಶಪ್ರತಿಯನ್ನು ಕುಟುಂಬಸ್ಥರಿಗೆ ನೀಡಿದರು. ಶ್ರೀಯಾಂಕಾ ಧನಶ್ರೀ, ಶರಣಗೌಡ ಪಾಟೀಲ್​, ಮಲ್ಲಿಕಾರ್ಜುನರೆಡ್ಡಿ, ರವೀಂದ್ರ ನಂದಿಗಾಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೇಡಂ ಕ್ಷೇತ್ರದಲ್ಲಿ ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಸಂಚಾರ
ಸೇಡಂ: ಜಾಕನಪಲ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿದ ಆಶಪ್ಪ ಹಾಗೂ ಸಿಡಿಲಿಗೆ ಎತ್ತನ್ನು ಕಳೆದುಕೊಂಡ ಚಂದ್ರಪ್ಪ ಪುಲಮೋಳ ಎಂಬುವವರ ಮನೆಗೆ ವೈದ್ಯಕಿಯ ಶಿಕ್ಷಣ ಸಚಿವ ಹಾಗೂ ಕ್ಷೇತ್ರದ ಶಾಸಕ ಡಾ.ಶರಣಪ್ರಕಾಶ ಪಾಟೀಲ್​ ಭೇಟಿ ನೀಡಿ ಸಾಂತ್ವನ ಹೇಳಿದರು.
ಸಿಡಿಲಿಗೆ ಬಲಿಯಾಗಿರುವ ಆಶಪ್ಪ ನರಸಪ್ಪ ಗ್ರಾಮದ ಮಹಿಪಾಲರೆಡ್ಡಿ ಎನ್ನುವರ ಜಮೀನು ಕಡತಿಗೆ ಹಾಕಿಕೊಂಡಿದ್ದು, ಮೇ 14ರಂದು ಹೊಲ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಸಂಜೆ 4ರ ಸುಮಾರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಜೀವಬಿಟ್ಟಿದ್ದ. ಆಶಪ್ಪನ ಪತ್ನಿ ಸುಗುಣಮ್ಮಗೆ ಪ್ರಕೃತಿ ವಿಕೋಪದಡಿ 5 ಲಕ್ಷ ರೂ. ಮಂಜೂರಿಗೊಳಿಸಲಾಗಿದ್ದು, ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ. ರೈತ ಚಂದ್ರಪ್ಪ ಪುಲಮೋಳ ತನ್ನ ಎತ್ತನ್ನು ದೊಡ್ಡಿಯಲ್ಲಿ ಕಟ್ಟಿದಾಗ ಸಿಡಿಲು ಬಡಿದು ಅಸುನೀಗಿತ್ತು. ಹೀಗಾಗಿ ರೈತ ಚಂದ್ರಪ್ಪನಿಗೆ ಸರ್ಕಾರದಿಂದ 32ಸಾವಿರ ರೂ. ಪರಿಹಾರ ಮಂಜೂರಿ ಆದೇಶಪ್ರತಿ ನೀಡಲಾಯಿತು.
ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಇಮ್ರಾನ್​ ಮಣಿಯಾರ, ಉಪ ತಹಸೀಲ್ದಾರ್​ ಶರಣಗೌಡ, ಪ್ರಮುಖರಾದ ಮಲ್ಲಿಕಾರ್ಜುನರೆಡ್ಡಿ, ದೇವಿಂದ್ರಪ್ಪ ನಾಯಕ, ರವೀಂದ್ರ ನಂದಿಗಾಮ, ತಿಮ್ಮಾರೆಡ್ಡಿ ಮಾಲಿಪಾಟೀಲ್​, ನಾರಾಯಣರೆಡ್ಡಿ ಪೊಲೀಸ್​ ಪಾಟೀಲ್​, ಸಿದ್ದಪ್ಪ ಬಡಿಗೇರ, ಭೀಮಶಪ್ಪ ನಾಯಕ, ಸಂತೋಷ ರಾಠೋಡ್​, ಮಹಿಪಾಲರೆಡ್ಡಿ ಪಾಟೀಲ್​, ಸಿದ್ದಪ್ಪ ಪುಲ್ಲಮ್ಮೋಳ, ಹುಸನೇಪ್ಪ ಹಡಪದ, ಆಶಪ್ಪ ಮುನಕನಪಲ್ಲಿ, ಕಿಷ್ಟಪ್ಪ ಬುರಾ ಇತರರಿದ್ದರು.
ಪಿಲ್ಲಿಗುಂಟಾ ತಾಂಡಾದಲ್ಲಿ 25 ಮೇಕೆ ಸಾವು
ಸೇಡಂ ತಾಲೂಕಿನ ಕಡಚರ್ಲಾ ಬಳಿಯ ಪಿಲ್ಲಿಗುಂಟಾ ತಾಂಡಾದಲ್ಲಿ ಭಾನುವಾರ ಸಿಡಿಲು ಬಡಿದು 25 ಮೇಕೆಗಳು ಮೃತಪಟ್ಟಿವೆ. ಹೀರ್ಯಾನಾಯಕ ತುಳಜ್ಯಾನಾಯಕ ಅವರ 13, ವಿಕ್ಯಾನಾಯಕ ನಾಣ್ಯಾನಾಯಕ್​ ಅವರ 3 ಹಾಗೂ ದೇವಲಾನಾಯಕ ರೂಪಲಾನಾಯಕ ಅವರ 9 ಮೇಕೆ ಸಿಡಿಲಿಗೆ ಬಲಿಯಾಗಿವೆ. ತಾಂಡಾದ ಸಮೀಪದ ಜಮೀನಿನಲ್ಲಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಸಚಿವ ಡಾ.ಶರಣಪ್ರಕಾಶ ಪಾಟೀಲ್​ ತಾಂಡಾಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಪಶುಸಂಗೋಪನೆ ಇಲಾಖೆಯಿಂದ ಪ್ರತಿ ಮೇಕೆಗೆ 7500 ರೂ.ನಂತೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ರಾಜಕುಮಾರ ರಾಠೋಡ್​, ತಾಪಂ ಮಾಜಿ ಉಪಾಧ್ಯಕ್ಷ ಶರಣರೆಡ್ಡಿ ಪಾಟೀಲ್​ ಕಡಚರ್ಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net