ಬೆಂಗಳೂರು: ಭಾರತೀಯ ಬಾಕ್ಸಿಂಗ್ ತಂಡವು ಕಾಮನ್‌ವೆಲ್ತ್ ಗೇಮ್ಸ್ ಅಭಿಯಾನವನ್ನು ಅತ್ಯಂತ ಉತ್ಸಾಹದಿಂದ ಆರಂಭಿಸಿದೆ. ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಜೊತೆಗೆ, ಸದ್ಯ ಎಲ್ಲರ ಗಮನವು IIS (ಜಿಂದಾಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್) ಬೆಂಬಲಿತ ಬಾಕ್ಸರ್‌ಗಳಾದ ಸಚಿನ್ ಸಿವಾಚ್, ಪ್ರೀತಿ ಪವಾರ್ ಮತ್ತು ಕಪಿಲ್ ಪೋಖರಿಯಾ ಅವರ ಮೇಲಿದೆ.