ಜೀತ ಪದ್ಧತಿ ತೊಲಗಿಸಲು ಬದ್ಧರಾಗಿ

Committed to abolishing serfdom
Committed to abolishing serfdom
Published on
ದೊಡ್ಡೇರಿ: ಜೀತ ಪದ್ಧತಿ ಸಾವಾಜಿಕ ಪಿಡುಗು. ಇದರಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಸೇವೆಗೆ ಬದ್ಧನಾಗಿರುತ್ತಾನೆ. ಇದು ಸಾವಾನ್ಯವಾಗಿ ಆರ್ಥಿಕ ಅಥವಾ ಸಾವಾಜಿಕ ಒತ್ತಡದಿಂದ ಉಂಟಾಗುತ್ತದೆ ಎಂದು ಜೀವ ಜ್ಯೋತಿ ಸಂಸ್ಥೆ ನಿರ್ದೇಶಕ ರಾಜೇಂದ್ರ ತಿಳಿಸಿದರು.
ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜೀತ ವಿಮುಕ್ತರ ಸಬಲೀಕರಣ ಮತ್ತು ಕಾರ್ಯಾಗಾರದಲ್ಲಿ ವಾತನಾಡಿದ ಅವರು, ಜೀತ ಕಾರ್ಮಿಕ ಪದ್ಧತಿ ಅಪರಾಧವಾಗಿದ್ದು, ವಾನವ ಕಳ್ಳ ಸಾಗಣೆ ಪುರುಷ, ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುವುದು ಅಪರಾಧವಾಗಿದೆ ಎಂದು ಹೇಳಿದರು.
ಜೀವ ಜ್ಯೋತಿ ಸಂಸ್ಥೆ ಮುಖಂಡ ಷಣ್ಮುಖ ಸುಂದರಂ ಮಾತನಾಡಿ, 1976ರಲ್ಲಿ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಭಾರತದಲ್ಲಿ ಜೀತ ಕಾರ್ಮಿಕ ಪದ್ಧತಿ ರದ್ದುಗೊಳಿಸಲಾಯಿತು ಎಂದರು.
ಜಿಲ್ಲಾ ಪತ್ರಕರ್ತರ ಸಂದ ನಿರ್ದೇಶಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಮಧುಗಿರಿ ತಾಲೂಕಿನಾದ್ಯಂತ ಸುವಾರು 986 ಜನ ಜೀತಗಾರರನ್ನು ಗುರುತಿಸಿ 915 ಜೀತಗಾರರಿಗೆ ಮನೆ ಮತ್ತು ಸರ್ಕಾರದಿಂದ ಸಹಾಯಧನವನ್ನು ಶಾಸಕ ಕೆ.ಎನ್ ರಾಜಣ್ಣ 2016 ಮತ್ತು 2017ನೇ ಸಾಲಿನಲ್ಲಿ ಕೊಡಿಸಿದ್ದು, ಉಳಿದಿರುವ 73 ಮಂದಿಗೆ ಮುಂದಿನ ದಿನದಲ್ಲಿ ಅನುಕೂಲ ಕಲ್ಪಿಸಲಿದ್ದಾರೆ ಎಂದರು.
ಗ್ರಾಪಂ ವಾಜಿ ಸದಸ್ಯರಾದ ಡಿ.ಎಲ್. ರಾಮಯ್ಯ, ಸೌಮ್ಯಾ, ಬಡವನಹಳ್ಳಿ ಗುರುನಾಥ್, ಹನುಮಂತರಾಯಪ್ಪ, ಕಲಾತಂಡದ ನಾಯಕ ಎಸ್ ಸಂಜೀವಯ್ಯ, ಗಂಗಾಧರಪ್ಪ, ಮುದ್ದಣ್ಣ, ಸಿದ್ದಗಂಗಪ್ಪ, ಸಿರಾ ಮೈಲಾರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net