ಡ್ರಗ್ಸ್ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿ

ಕೆಂಭಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಯಲ್ಲಿ ಸೋಮವಾರ ಹಮ್ಮಿಕೊಂಡ ಡ್ರಗ್ಸ್ಮುಕ್ತ ಕಾರ್ಯಕ್ರಮದ ಭಿತ್ತಿಪತ್ರವನ್ನು ಎಎಸ್‌ಐ ಮೌನೇಶ ಬಡಿಗೇರ ಬಿಡುಗಡೆ ಮಾಡಿದರು. ಮಲ್ಲಿಕಾರ್ಜುನ, ರೇಖಾ, ಡಾ.ಯಂಕನಗೌಡ ಇತರರಿದ್ದರು.
ಕೆಂಭಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಯಲ್ಲಿ ಸೋಮವಾರ ಹಮ್ಮಿಕೊಂಡ ಡ್ರಗ್ಸ್ಮುಕ್ತ ಕಾರ್ಯಕ್ರಮದ ಭಿತ್ತಿಪತ್ರವನ್ನು ಎಎಸ್‌ಐ ಮೌನೇಶ ಬಡಿಗೇರ ಬಿಡುಗಡೆ ಮಾಡಿದರು. ಮಲ್ಲಿಕಾರ್ಜುನ, ರೇಖಾ, ಡಾ.ಯಂಕನಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಕರಿಗೆ ಎಎಸ್‌ಐ ಮೌನೇಶ ಕರೆ
  • ಕೆಂಭಾವಿಯಲ್ಲಿ ಭಿತ್ತಿಪತ್ರ ಬಿಡುಗಡೆ
ಕೆಂಭಾವಿ : ಯುವಕರು ತಮ್ಮ ಮನಸ್ಸು ಮತ್ತು ಬುದ್ಧಿಯನ್ನು ನಿಗ್ರಹಿಸಿ ಹೆಚ್ಚು ಸಮಯ ಓದಿನ ಕಡೆ ಗಮನ ಹರಿಸುವ ಮೂಲಕ ಡ್ರಗ್ಸ್ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಎಎಸ್‌ಐ ಮೌನೇಶ ಬಡಿಗೇರ ಹೇಳಿದರು.
ಪಟ್ಟಣದ ಗಂಗೂಬಾಯಿ ಶಾಂತಗೌಡ ಪೊಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡ ಡ್ರಗ್ಸ್ಮುಕ್ತ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಈ ಐದು ಹಂತ ವಿದ್ಯಾರ್ಥಿಗಳಿಗೆ ಪಂಚ ವಾರ್ಷಿಕ ಯೋಜನೆ ಇದ್ದಂತೆ. ಈ ಐದು ವರ್ಷಗಳಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಸುವರ್ಣಾವಕಾಶ ಇದ್ದು, ಸದೃಢ ಆರೋಗ್ಯಕ್ಕೆ ಯುವ ಜನತೆ ಗುಟ್ಕಾ, ಮಟಕಾ, ಜೂಜÁಟ, ಮದ್ಯಪಾನ, ಧೂಮಪಾನ, ಡ್ರಗ್ಸ್, ಗಾಂಜÁ ಸೇರಿ ಜೀವಕ್ಕೆ ಅಪಾಯ ತರುವ ಯಾವುದೇ ದುಶ್ಚಟಗಳಿಗೆ ದಾಸರಾಗದೆ ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಪೊಲೀಸ್ ಸಿಬ್ಬಂದಿ ರೇಖಾ ಮಾತನಾಡಿ, ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಹೆಚ್ಚಿನ ಸಮಯ ಅಭ್ಯಾಸದ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಮರಡ್ಡಿ ಅಧ್ಯಕ್ಷತೆ ವಹಿಸಿದ್ದರು, ಡಾ.ಪೂಜÁ ಹೊನ್ನುಟಗಿ, ನಸ್ರೀನ್ ತಾಜ್, ಸುಮಾ, ಡಾ.ಯಂಕನಗೌಡ ಪಾಟೀಲ್, ಶರಣಪ್ಪ ಸಾಹು, ನಿಂಗನಗೌಡ, ಮುರ್ತುಜಾ ಚಿಗರಾಳ, ಸಂಗಮೇಶ, ಮಾಸುಮ ಅಲಿ ನಾಶಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net