ಕನಿಷ್ಠ ತಾಪಮಾನದಲ್ಲಿ ದಾವಣಗೆರೆ,ವಿಜಯಪುರ, ಬೀದರ್ನಲ್ಲಿ ತಲಾ 9, ಧಾರವಾಡ 9.8, ಚಿಂತಾಮಣಿ 10, ಗದಗ 10.8 ಮತ್ತು ಹಾವೇರಿ 10.6 ಡಿ.ಸೆ. ಗುರುವಾರ ದಾಖಲಾಗಿದೆ. ಮುಂದಿನ 5 ದಿನಗಳಲ್ಲಿ ಕೆಲ ಪ್ರದೇಶಗಳಲ್ಲಿ 3-5 ಡಿ.ಸೆ. ಉಷ್ಣಾಂಶ ಇಳಿಕೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಮುಂದಿನ 2 ದಿನ ಶೀತ ಅಲೆ(ಕೋಲ್ಡ್ವೇವ್) ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.