ತಾಪಮಾನ ಕುಸಿತ: 23 ಜಿಲ್ಲೆಗಳಿಗೆ ಕೋಲ್ಡ್​ ವೇವ್​​​​​​​-cold wave

coldwave
coldwave
Published on
ಬೆಂಗಳೂರು: ರಾಜ್ಯದ ಹಲವೆಡೆ 2-3 ದಿನಗಳಿಂದ ಹೆಚ್ಚಳವಾಗಿದ್ದ ಉಷ್ಣಾಂಶ ಮತ್ತೆ ತೀವ್ರವಾಗಿ ಕುಸಿತವಾಗಿದೆ. ಇದರಿಂದಾಗಿ ಮೈ ಕೊರೆಯುವ ಚಳಿಗೆ ಕರುನಾಡು ನಲುಗುವಂತಾಗಿದೆ.
ರಾಜ್ಯದ ಇತರ ಜಿಲ್ಲೆಗಳಗಿಂತ ವಿಜಯಪುರದಲ್ಲಿ ಅತಿ ಕಡಿಮೆ ತಾಪಮಾನ 6.9 ಡಿ.ಸೆ.ಶನಿವಾರ ವರದಿಯಾಗಿದೆ. ಕಳೆದ 10 ವರ್ಷಗಳಲ್ಲಿ 3ನೇ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. 2009 -10 ರ ಡಿಸೆಂಬರ್‌ನಲ್ಲಿ 6 ಡಿ.ಸೆ.ಮತ್ತು 2023ರ ಡಿಸೆಂಬರ್‌ನಲ್ಲಿ 6.5 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಮುಂದಿನ 2 ದಿನ ತೀವ್ರವಾಗಿ ಶೀತಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಕೊಟ್ಟಿದೆ. ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 6-7 ಡಿ. ಸೆ.ಉಷ್ಣಾಂಶ ಕುಸಿತದಿಂದ ಚಳಿ ತೀವ್ರತೆ ಇನ್ನಷ್ಟು ಹೆಚ್ಚಿಸಿದೆ.
ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಬೆಂ. ಗ್ರಾಮಾಂತರ ದಲ್ಲಿ ಡಿ.22ರವರೆಗೆ ಶೀತ ಗಾಳಿ ಬೀಸುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿ.ಸೆ.ದೊಳಗೆ ಕಂಡುಬಂದಿದೆ.
ಮಂಜುಮಯ ವಾತಾವರಣ:
ಬೆಂಗಳೂರು ನಗರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಮತ್ತುಇಬ್ಬನಿ ಸುರಿದು ಮಂಜುಮಯ ವಾತಾವರಣ ಕಂಡುಬರುತ್ತಿದೆ. ಶೀತ ಅಲೆಯಿಂದ ಹಿರಿಯ ನಾಗರಿಕರು, ಮಕ್ಕಳು, ಆರೋಗ್ಯ ಸಂಬಂಧಿಸಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮೇಲೆ ಆರೋಗ್ಯದ ಅಪಾಯ ಹೆಚ್ಚಿಸುತ್ತಿದೆ. ಮುಂಜಾನೆ ಉಂಟಾಗುವ ಮಂಜುವಿನಿಂದ ಬಸ್,ರೈಲು ಮತ್ತು ವಿಮಾನ ಸಾರಿಗೆ ಮೇಲೆ ಪರಿಣಾಮ ಬೀರುತ್ತಿದೆ. ತಾಪಮಾನ ಕುಸಿತದಿಂದ ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಟ್ಟಿದೆ. ರಾತ್ರಿ ವೇಳೆ ವಾಹನಗಳ ಓಡಾಟ ಸಂಖ್ಯೆ ಕುಸಿತವಾಗಿದೆ.
ಕನಿಷ್ಠ ಉಷ್ಣಾಂಶ ದಾಖಲು ವಿವರ
ಜಿಲ್ಲೆ ಡಿ.ಸೆ.
ವಿಜಯಪುರ 6.9
ಹಾಸನ 7.0
ಬೀದರ್ 7.4
ರಾಯಚೂರು 8.8
ಧಾರವಾಡ 9.2
ಗದಗ 9.4
ಮೈಸೂರು 10.2
ಬೆಳಗಾವಿ 10.2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net