ಹೆಚ್ಚುವರಿ ಎಥೆನಾಲ್ ಮಿಕ್ಸಿಂಗ್​ನಿಂದ ರಾಜ್ಯದ ವಾಹನಗಳಲ್ಲಿ ಹಲವು ಸಮಸ್ಯೆ! ಸೋಮವಾರ ದಾಖಲೆ ಬಿಡುಗಡೆ: ಸಿಎಂ ಡಿಕೆಶಿ

e20 petrol
ಹೆಚ್ಚುವರಿ ಎಥೆನಾಲ್ ಮಿಕ್ಸಿಂಗ್​ನಿಂದ ರಾಜ್ಯದ ವಾಹನಗಳಲ್ಲಿ ಹಲವು ಸಮಸ್ಯೆ! ಸೋಮವಾರ ದಾಖಲೆ ಬಿಡುಗಡೆ: ಸಿಎಂ ಡಿಕೆಶಿ
Published on: 

ಬೆಂಗಳೂರು: ರಾಜ್ಯದ ಹಲವು ಪೆಟ್ರೋಲ್​ ಬಂಕ್​ಗಳಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಶೇ.20ರಷ್ಟು ಪ್ರಮಾಣ ಮೀರಿ ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ಬಗ್ಗೆ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾರಿ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ . ಈ ವಿಚಾರವನ್ನು ರಾಜಕೀಯ ಉದ್ದೇಶದಿಂದ ಪ್ರಸ್ತಾಪಿಸುತ್ತಿಲ್ಲ. ಜನರಿಗೆ ಆಗುತ್ತಿರುವ ತೊಂದರೆಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ರಾಜ್ಯದ 67 ಕಡೆಯಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರಿಶೀಲನಾ ಕಾರ್ಯದ ಸುಮಾರು ಶೇ.30ರಷ್ಟು ಪ್ರಗತಿಯಾಗಿದೆ. ಈ ಸಂಬಂಧ ಉಸ್ತುವಾರಿ ಸಚಿವರಿಗೆ ಅಗತ್ಯ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೂ ಮಾಹಿತಿ ರವಾನಿಸಲಾಗಿದೆ ಎಂದು ಹೇಳಿದರು.

ಹೆಚ್ಚು ಎಥೆನಾಲ್ ಮಿಕ್ಸಿಂಗ್​ನಿಂದ ರಾಜ್ಯದ ಸಾವಿರಾರು ವಾಹನಗಳಲ್ಲಿ ಇಂಜಿನ್ ಸಮಸ್ಯೆ, ಮೈಲೇಜ್ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಕಾಡಿವೆ. ಪ್ರಾಥಮಿಕ ಪರಿಶೀಲನೆಯಲ್ಲಿ ಕೆಲವು ಇಂಧನ ವಿತರಣಾ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವಾಗುತ್ತಿರುವ ಅನುಮಾನ ವ್ಯಕ್ತವಾಗಿದೆ. ಕಡಿಮೆ ಬೆಲೆಗೆ ಲಭ್ಯವಿರುವ ಎಥೆನಾಲ್ ಬಳಸಿ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಸಚಿವರು ಸೋಮವಾರ ಸಮಗ್ರ ಪರಿಶೀಲನಾ ದಾಖಲೆಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

Also Read
ಈ ಏರ್​ಪೋರ್ಟ್​ನಲ್ಲಿ ಕ್ಯಾಮರಾ ಬ್ಯಾನ್​! ಫೋಟೋ, ವಿಡಿಯೋ ಚಿತ್ರೀಕರಣ, ಲೈವ್ ಸ್ಟ್ರೀಮಿಂಗ್​ಗೆ ಸಂಪೂರ್ಣ ನಿಷೇಧ! | No Camera
e20 petrol

ಮತ್ತೊಂದೆಡೆ, ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗುತ್ತಿದೆ ಎಂಬ ಆರೋಪವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಹಿಂದೆ ತಳ್ಳಿಹಾಕಿತ್ತು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ ಸಂಗ್ರಹಿಸಲಾದ ಇ20 ಪೆಟ್ರೋಲ್‌ನ 893 ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.