ಅತೃಪ್ತರು ರಾಜೀನಾಮೆ ಕೊಟ್ರೆ ತಕ್ಷಣವೇ ಅಂಗೀಕಾರ; ಬೆದರಿಕೆಯೊಡ್ಡಿದ ಶಾಸಕರಿಗೆ ಬಾಗಿಲು ತೆರೆದಿಟ್ಟ ಸಿಎಂ ಡಿಕೆಶಿ

ಅತೃಪ್ತರು ರಾಜೀನಾಮೆ ಕೊಟ್ರೆ ತಕ್ಷಣವೇ ಅಂಗೀಕಾರ
ಅತೃಪ್ತರು ರಾಜೀನಾಮೆ ಕೊಟ್ರೆ ತಕ್ಷಣವೇ ಅಂಗೀಕಾರ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸಂಪುಟ ವಿಸ್ತರಣೆಗೊಂಡ ಬೆನ್ನಲ್ಲೇ ಸಂಕಟ ವಿಸ್ತರಣೆ
  • ಮಂತ್ರಿಗಿರಿ ಸಿಗದಿದ್ದಕ್ಕೆ ಅಸಮಾಧಾನಗೊಂಡ ಶಾಸಕರು ರಾಜೀನಾಮೆ ಕೊಡುವುದಾಗಿ ಬೆದರಿಕೆ
  • ಅತೃಪ್ತರು ರಾಜೀನಾಮೆ ನೀಡಿದರೆ ಕೆಲವೇ ಕ್ಷಣಗಳಲ್ಲಿ ಅಂಗೀಕಾರ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೊಂಡ ಬೆನ್ನಲ್ಲೇ ಸಂಕಟ ಕೂಡ ರಾಜ್ಯ ಸರ್ಕಾರದಲ್ಲಿ ಶುರುವಾಗಿದ್ದು, ಮಂತ್ರಿಗಿರಿ ಸಿಗದಿದ್ದಕ್ಕೆ ಅಸಮಾಧಾನಗೊಂಡ ಶಾಸಕರು ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದವರಿಗೆ ಸಿಎಂ ಡಿಕೆ ಶಿವಕುಮಾರ್​ ಬಿಗ್ ಶಾಕ್​ ನೀಡಿದ್ದಾರೆ.
ಶಾಸಕರ ರಾಜೀನಾಮೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್​ ಹೈಕಮಾಂಡ್​, ಡಿಕೆಶಿ ಜತೆ ದೂರವಾಣಿ ಕರೆಯಲ್ಲಿ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ಮಾತನಾಡಿರುವ ಸಿಎಂ, ಅತಿವೃಷ್ಟಿ, ಬರ ಪರಿಸ್ಥಿತಿ ಹಿನ್ನೆಲೆ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ತೆರಳುವಂತೆ ಸಚಿವರಿಗೆ ಸೂಚನೆ ನೀಡಿದ್ದೇನೆ. ಸಚಿವ ಬಸವಂತಪ್ಪಗೆ ಇನ್ನೂ ಯಾವುದೇ ಜಿಲ್ಲೆ ನಿಯೋಜನೆಗೊಂಡಿಲ್ಲ ಎಂದರು.
ಅತೃಪ್ತರು ರಾಜೀನಾಮೆ ನೀಡಿದರೆ ಕೆಲವೇ ಕ್ಷಣಗಳಲ್ಲಿ ಅಂಗೀಕಾರ ಮಾಡುತ್ತೇವೆ. ಇಲ್ಲಿ ತಾಳ್ಮೆ ಇರಬೇಕು. ರಾಜಕೀಯದಲ್ಲಿ ರಾಜೀನಾಮೆ ಎಂಬುದು ತೀರ ಸಾಮಾನ್ಯ. ಭವಿಷ್ಯ ಬೇಕು ಎಂದವರು ಸಮಾಧಾನ ಚಿತ್ತದಿಂದ ಇರಬೇಕು. ಸಚಿವ ಸ್ಥಾನ ಸಿಗದಿದ್ದಾಗ ಸಿದ್ಧರಾಮಯ್ಯ ಅವರ ಕಾಲದಲ್ಲಿ ನಾನು ತಾಳ್ಮೆ ವಹಿಸಲಿಲ್ಲವೇ? ವೀರೇಂದ್ರ ಪಾಟೀಲರ ಕಾಲದಲ್ಲಿ ಬಂಗಾರಪ್ಪ ಅವರಿಗೆ ಸಚಿವಗಿರಿ ಸಿಕ್ಕಿರಲಿಲ್ಲ ಅವರು ಕಾಯಲಿಲ್ಲವೇ ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್​, ಧರಂ ಸಿಂಗ್ ಇವರೆಲ್ಲರೂ ತಾಳ್ಮೆಯಿಂದ ಇದ್ದೇ ಉನ್ನತ ಸ್ಥಾನ ಅಲಂಕರಿಸಿದರು. ನಿಗಮ ಮಂಡಳಿ ಪುನಾರಚನೆ ಎರಡೂವರೆ ವರ್ಷ ಪೂರೈಸಿದವರಿಗೆ ರಾಜೀನಾಮೆ ನೀಡಲು ಸೂಚನೆ ಕೊಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು. ಇದಕ್ಕೂ ಮೊದಲು ಸಚಿವ‌ ಸ್ಥಾನ ವಂಚಿತ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಅಪ್ಪಾಜಿನಾಡಗೌಡ ಸದಾಶಿವನಗರದ ನಿವಾಸದಲ್ಲಿ ಸಿಎಂ ಅವರನ್ನು ಭೇಟಿಯಾಗಿ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net