ಕುಟುಂಬಸ್ಥರ ಜೊತೆ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿಕೆ ಶಿವಕುಮಾರ್..DK Shivakumar

Karnataka CM DK Shivakumar
Karnataka CM DK Shivakumar
Published on

ಪ್ರಮುಖ ಮುಖ್ಯಾಂಶಗಳು

  • ಕುಟುಂಬ ಸದಸ್ಯರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
  • ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿಕೆ ಶಿವಕುಮಾರ್
  • ಶಾಸಕ ಕುಣಿಗಲ್ ರಂಗನಾಥ್ ದಂಪತಿ ಸಿಎಂಗೆ ಸಾಥ್
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​ ಅವರು ಶುಕ್ರವಾರ ಮುಂಜಾನೆ ಪತ್ನಿ, ಅಳಿಯ, ಪುತ್ರ ಸೇರಿದಂತೆ ಕುಟುಂಬಸ್ಥರೊಂದಿಗೆ ಆಂಧ್ರದಲ್ಲಿನ ಪ್ರಸಿದ್ಧ ದೇಗುಲ ತಿರುಮಲ ತಿರುಪತಿ ಬೆಟ್ಟಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ ಮುಖ್ಯಮಂತ್ರಿಗೆ ಅವರ ಆಪ್ತ ಹಾಗೂ ಶಾಸಕ ಕುಣಿಗಲ್ ರಂಗನಾಥ್ ಸಾಥ್ ಕೊಟ್ಟಿದ್ದಾರೆ.
ಸಿಎಂ ಡಿಕೆ ಶಿವಕುಮಾರ್​ ಅವರು ಮಹಾದ್ವಾರಂ ತಲುಪುತ್ತಲೇ ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರು ಅಧಿಕೃತವಾಗಿ ಸ್ವಾಗತ ಕೋರಿದರು. ತಿಮ್ಮಪ್ಪನಿಗೆ ಮುಂಜಾನೆ ನಡೆಯುವ ವಿಶೇಷ ಪೂಜೆಯಲ್ಲಿ ಅವರು ಭಾಗಿಯಾದರು.
ಸಿಎಂ ಟ್ವೀಟ್​ನಲ್ಲಿ ಹೀಗಿದೆ
ಓಂ ನಮೋ ವೆಂಕಟೇಶಾಯ ಕಾಮಿತಾರ್ಥ ಪ್ರದಾಯಿನೇ ಪ್ರಣತಃ ಕ್ಲೇಶ ನಾಶಾಯ ಗೋವಿಂದಾಯ ನಮೋ ಸೂಚಕ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಧರ್ಮಪತ್ನಿಯನ್ನು ಭೇಟಿ ಮಾಡಿ, ದೇವರ ದಿವ್ಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹವೂ ಪ್ರತಿಯೊಬ್ಬರ ಮೇಲಿರಲಿ, ನಾಡು ಸಮೃದ್ಧಿಯಾಗಲಿ ಎಂದು ಆಶಿಸುತ್ತೇನೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.
ವಿಧಾನಪರಿಷತ್​ನಲ್ಲಿ 'ಕೈ'ಗೆ ಗೆಲುವು
ಗುರುವಾರ 7 ಸ್ಥಾನಕ್ಕೆ ವಿಧಾನ ಪರಿಷತ್​ ಚುನಾವಣೆ ನಡೆದಿದ್ದು, ಕಾಂಗ್ರೆಸ್​ 5 ಸ್ಥಾನ ಬಾಚಿಕೊಳ್ಳುವ ಮೂಲಕ ಗೆದ್ದು ಬೀಗಿತ್ತು. ಆ ಬೆನ್ನಲ್ಲೇ ಡಿಕೆ ಶಿವಕುಮಾರ್​ ಅವರು ತಿರುಪತಿಗೆ ಕುಟುಂಬಸ್ಥರ ಜೊತೆಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net