ಸಿಎಂ ಡಿಕೆಶಿ ಸಂಪುಟ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ನೂತನ ಸಚಿವರಿಗೆ ಖಾತೆ ಹಂಚಿಕೆ
ನೂತನ ಸಚಿವರಿಗೆ ಖಾತೆ ಹಂಚಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಭಾರಿ ಗೊಂದಲ ಹಾಗೂ ಕುತೂಹಲಕ್ಕೆ ಸಾಕ್ಷಿಯಾಗಿದ್ದ ಸಚಿವ ಸಂಪುಟ ಸೇರಿದ ನೂತನ ಸಚಿವರ ಖಾತೆ
  • ಕಡೆಗೂ ಸಚಿವರಿಗೆ ಖಾತೆ ಹಂಚಿಕೆ ಫೈನಲ್​ ಮಾಡಿ ಘೋಷಿಸಿದ ಸಿಎಂ ಡಿಕೆಶಿ
  • ಯಾರಿಗೆ ಯಾವ ಇಲಾಖೆ ಸಿಕ್ಕಿದೆ? ಎಂಬುದರ ಕಂಪ್ಲೀಟ್​ ಡಿಟೇಲ್ಸ್ ಇಲ್ಲಿದೆ

ಯಾವ ಸಚಿವರಿಗೆ ಯಾವ ಖಾತೆ?

1. ರಿಜ್ವಾನ್ ಅರ್ಷದ್ - ಆಹಾರ ಇಲಾಖೆ
2. ಡಾ. ಅಜಯ್ ಸಿಂಗ್ - ಸಣ್ಣ ನೀರಾವರಿ, ಐಟಿ-ಬಿಟಿ 
3. ಹೆಚ್.ಸಿ. ಬಾಲಕೃಷ್ಣ - ಪೌರಾಡಳಿತ 
4. ಕೆ.ಎಸ್. ಬಸವಂತಪ್ಪ - ಮುಜರಾಯಿ, ಮೀನು ಮತ್ತು ಬಂದರು ಒಳಾಡಳಿತ 
5. ಸಂತೋಷ್ ಲಾಡ್ - ಕಾರ್ಮಿಕ ಇಲಾಖೆ 
6. ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 
7. ಎಸ್.ಎಸ್. ಮಲ್ಲಿಕಾರ್ಜುನ್ - ಗಣಿ ಮತ್ತು ಭೂ ವಿಜ್ಞಾನ
8. ಎನ್. ಚಲುವರಾಯಸ್ವಾಮಿ - ಜಲಸಂಪನ್ಮೂಲ ಇಲಾಖೆ
9. ಬಿ.ಝಡ್. ಜಮೀರ್ ಅಹಮದ್ ಖಾನ್ - ವಸತಿ ಇಲಾಖೆ
10. ಸಿ. ಪುಟ್ಟರಂಗಶೆಟ್ಟಿ - ಪಶುಸಂಗೋಪನೆ ಮತ್ತು ರೇಷ್ಮೆ
11. ಬಸವರಾಜ ರಾಯರೆಡ್ಡಿ - ಉನ್ನತ ಶಿಕ್ಷಣ 
12. ಲಕ್ಷ್ಮಣ ಸವದಿ - ಸಹಕಾರ ಇಲಾಖೆ
13. ಕೆ.ಎಚ್​. ಮುನಿಯಪ್ಪ - ಸಮಾಜ ಕಲ್ಯಾಣ
14. ಯುಟಿ ಖಾದರ್ - ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ 
15. ಕೆ.ಎಂ. ಶಿವಲಿಂಗೇಗೌಡ - ಅಬಕಾರಿ 
16. ಪಿ.ಎಂ. ನರೇಂದ್ರಸ್ವಾಮಿ - ಕೃಷಿ ಇಲಾಖೆ
17. ವಿಜಯಾನಂದ ಕಾಶಪ್ಪನವರ್ - ಸಣ್ಣ ಕೈಗಾರಿಕೆ 
18. ರುದ್ರಪ್ಪ ಲಮಾಣಿ - ಸಕ್ಕರೆ ಮತ್ತು ಜವಳಿ ಇಲಾಖೆ
19. ಬಿ. ನಾಗೇಂದ್ರ - ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
20. ಶಿವರಾಜ್ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 
21. ಟಿ. ರಘುಮೂರ್ತಿ - ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
22. ರಾಮಲಿಂಗಾರೆಡ್ಡಿ - ಅರಣ್ಯ ಮತ್ತು ಪರಿಸರ‌ ಇಲಾಖೆ
ಇನ್ನು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರು, ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಿಎಂ ಕಾನೂನು ಸಲಹೆಗಾರರಾಗಿದ್ದ ಪೊನ್ನಣ್ಣ, ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದರು. ಆದರೆ, ಡಿಕೆಶಿ ಮುಖ್ಯಮಂತ್ರಿಯಾದ ಬಳಿಕ ಅವರ ಸರ್ಕಾರದಲ್ಲೂ ಕೂಡ ಸಚಿವರ ಸ್ಥಾನ ಸಿಗಲಿಲ್ಲ. ಈ ಕಾರಣ, ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ವಿಧಾನಸಭೆ ಉಪಾಧ್ಯಕ್ಷರಾಗಿ ಮಂಕಾಳ್ ವೈದ್ಯ

ಇನ್ನೂ ಸಚಿವ ಸ್ಥಾನದಿಂದ ವಂಚಿತರಾಗಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರಿಗೆ ವಿಧಾನಸಭಾ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net