ಗ್ರಾಮದ ಗುಡ್ಡದ ಮೇಲಿನ ಸರ್ಕಾರಿ ಜಾಗದಲ್ಲಿ ಅನೇಕರು ಮನೆ ನಿರ್ಮಿಸಿಕೊಳ್ಳಲು ರಾತ್ರೋರಾತ್ರಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಅಕ್ರಮ ಮನೆಗಳನ್ನು ತೆರವುಗೊಳಿಸಿಕೊಳ್ಳುವಂತೆ ಮನೆ ಮಾಲೀಕರಿಗೆ ಪಂಚಾಯಿತಿಯವರು ಸೂಚನೆ ಕೊಟ್ಟಿದ್ದರು. ಆದರೆ, ಮನೆ ಮಾಲೀಕರು ಅವುಗಳನ್ನು ತೆರವುಗೊಳಿಸಿಕೊಂಡಿರಲಿಲ್ಲ. ತಹಸೀಲ್ದಾರರ ಸೂಚನೆಯಂತೆ ಜೆಸಿಬಿ ಬಳಸಿ ಮನೆಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ನಿವಾಸಿಗಳು, ಸೂರು ಇಲ್ಲದವರಿಗೆ ಗ್ರಾಮ ಪಂಚಾಯಿತಿಯಿ0ದ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.