ಅನಧಿಕೃತ ಗುಡಿಸಲು ತೆರವುಗೊಳಿಸಿ

ಹೂವಿನಹಡಗಲಿಯಲ್ಲಿ ಅನಧಿಕೃತ ನಿರ್ಮಿಸಿರುವ ಗುಡಿಸಲುಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕಾಯಕನಗರ ಪರಿಶಿಷ್ಟ ಪಂಗಡದ ಹಿತರಕ್ಷಣಾ ಟ್ರಸ್ಟ್ ಸದಸ್ಯರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಟ್ರಸ್ಟ್ ಗೌರವಾಧ್ಯಕ್ಷ ಶಿವಾನಂದಪ್ಪ, ಸದಸ್ಯರಾದ ಮ್ಯಾದರ್ ಕೋಟೆಪ್ಪ, ಎಲ್.ಶಿವಕುಮಾರ, ನಾಗರಾಜ, ಶಿಲ್ಪಾ, ಲಕ್ಷ್ಮವ್ವ, ಚಿಂತಿ ಮಾಲತಿ, ಪ್ರಕಾಶ್, ಗೀತಮ್ಮ, ರತ್ನಮ್ಮ, ಭೀಮವ್ವ ಇತರರಿದ್ದರು.

Published on
ಹೂವಿನಹಡಗಲಿ: ಪಟ್ಟಣದ ಕಾಯಕ ನಗರದ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳಿಗೆ ನಿಗದಿ ಪಡಿಸಿರುವ ನಿವೇಶನಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗುಡಿಸಲುಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕಾಯಕ ನಗರ ಪರಿಶಿಷ್ಟ ಪಂಗಡದ ಹಿತರಕ್ಷಣಾ ಟ್ರಸ್ಟ್‌ನಿಂದ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
ಟ್ರಸ್ಟ್ ಗೌರವಾಧ್ಯಕ್ಷ ಶಿವಾನಂದಪ್ಪ ಮಾತನಾಡಿ, ಕುಶಲಕರ್ಮಿಗಳಿಗಾಗಿ ಮೀಸಲಿರಿಸಿರುವ ನಿವೇಶನಗಳಲ್ಲಿ ಅನಧಿಕೃತವಾಗಿ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ನಮಗೆ ಸೇರಿದ ಸ್ಥಳದಲ್ಲಿ ಗುಡಿಸಲು ತೆರವುಗೊಳಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದರೆ ಅವರು ಪುರಸಭೆ ಅಧಿಕಾರಿಗಳ ಹೆಸರು ಹೇಳುತ್ತಿದ್ದಾರೆ.
 ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಒಂದು ವಾರದಲ್ಲಿ ಗುಡಿಸಲುಗಳನ್ನು ತೆರವುಗೊಳಿಸದಿದ್ದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. 
ಪ್ರಮುಖರಾದ ಶಿವಾನಂದಪ್ಪ, ಮ್ಯಾದರ್ ಕೋಟೆಪ್ಪ, ಎಲ್.ಶಿವಕುಮಾರ, ನಾಗರಾಜ, ಶಿಲ್ಪಾ, ಲಕ್ಷ್ಮವ್ವ, ಚಿಂತಿ ಮಾಲತಿ, ಪ್ರಕಾಶ್, ಗೀತಮ್ಮ, ರತ್ನಮ್ಮ, ಭೀಮವ್ವ, ಹನುಮಕ್ಕ, ಬಸವರಾಜಪ್ಪ, ರೇಣುಕಮ್ಮ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net