ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಬಬಲೇಶ್ವರ ತಾಲೂಕಿನ ನಿಡೋಣಿ-ಯಕ್ಕುಂಡಿ-ನಾಗರಾಳ- ಕುಮಠೆ-ಅರ್ಜುಣಗಿ ಹಂಗಣಿ, ಕಾತ್ರಾಳ, ಚಿಕ್ಕಿಲಕಿ, ನಂದ್ಯಾಳ ದನ್ನರಗಿ, ಟಕ್ಕಳಕಿ, ಬಿಜ್ಜರಗಿ, ಗೊಣಸಗಿ ಮತ್ತು ಕನಮಡಿ (ಗುಲಗಂಜಿ) ಹಳ್ಳಿಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ ರೀಚಾರ್ಜ್ ಶಾಫ್ಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿಪಡಿಸುವ 988.42 ಲಕ್ಷ ರೂ. ಕಾಮಗಾರಿಗೆ ಅರ್ಜುಣಗಿ ಗ್ರಾಮದಲ್ಲಿ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸದ್ಯ ಅರ್ಜುಣಗಿಯಲ್ಲಿ ಪ್ರಾಯೋಗಿಕವಾಗಿ ಸರಣಿ ಚೆಕ್‌ಡ್ಯಾಂ ಯೋಜನೆಗೆ ಚಾಲನೆ ನೀಡಲಾಗಿದೆ. ನಂತರದ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಸರಣಿ ಚೆಕ್ ಡ್ಯಾಂ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವವಿಲ್ಲ. ಈ ನೀರಾವರಿ ಯೋಜನೆಯಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.