ಮಲಬಾರ್ ಗ್ರೂಪ್‌ನಿಂದ ರಾಜ್ಯಾದ್ಯಂತ ಸ್ವಚ್ಛತಾ ಅಭಿಯಾನ

ದೇಶಾದ್ಯಂತ 1 ಲಕ್ಷ ಸಸಿ ನೆಡುವ ಗುರಿ
As part of the 34th Foundation Day celebrations of the Malabar Group, Malabar staff participated in cleanliness drives at various locations.
ಮಲಬಾರ್ ಗ್ರೂಪ್‌ನ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಲಬಾರ್ ಸಿಬ್ಬಂದಿಗಳು ವಿವಿಧೆಡೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಕನ್ನಡ ರಾಜ್ಯೋತ್ಸವ ಹಾಗೂ ಮಲಬಾರ್ ಗ್ರೂಪ್‌ನ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕರ್ನಾಟಕದಾದ್ಯಂತ ವಿವಿಧೆಡೆ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ವಿವಿಧ ಶೋರೂಮ್‌ಗಳ 1,500ಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಂಡು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

ಪರಿಸರ ಸಂರಕ್ಷಣೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಉತ್ತಮ ಆಡಳಿತದ ತತ್ವಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ನಡೆದ ಅಭಿಯಾನದಲ್ಲಿ ಮಲಬಾರ್ ಗ್ರೂಪ್‌ನ 9 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸಿದ್ದರು. ಸ್ವಚ್ಛ ಪರಿಸರ ನಿರ್ಮಾಣದ ಜತೆಗೆ ಸಮಾಜದ ಬಗ್ಗೆ ಪ್ರತಿಯೊಬ್ಬರಲ್ಲೂ ಜವಾಬ್ದಾರಿಯ ಪ್ರಜ್ಞೆ ಮೂಡಿಸುವುದು ಕಾರ್ಯಕ್ರಮದ ಆಶಯವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹಮ್ಮದ್, ಪರಿಸರದ ಮೇಲಿನ ಜವಾಬ್ದಾರಿ, ಸಾಮಾಜಿಕ ಬದ್ಧತೆ, ಪಾರದರ್ಶಕತೆ ಹಾಗೂ ನೈತಿಕ ಆಡಳಿತದ ತತ್ವಗಳನ್ನು ವ್ಯವಹಾರ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಎಸ್‌ಜಿ ತತ್ವಗಳನ್ನು ಬಲಪಡಿಸಲು ನಮ್ಮ ಸಂಸ್ಥೆ ಸದಾ ಬದ್ಧವಾಗಿದೆ. ಪರಿಸರ ಸುಸ್ಥಿರತೆಗೆ ಪೂರಕವಾಗಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಸುಮಾರು ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮಲಬಾರ್ ಗ್ರೂಪ್‌ನ ಸಾಮಾಜಿಕ ಕಳಕಳಿ

ವ್ಯವಹಾರದ ಬೆಳವಣಿಗೆಯ ಜತೆಗೆ ಸಾಮಾಜಿಕ ಹೊಣೆಗಾರಿಕೆಗೂ ಮಲಬಾರ್ ಗ್ರೂಪ್ ಆದ್ಯತೆ ನೀಡುತ್ತಿದೆ. ಸಮಾಜದ ವಿವಿಧ ವರ್ಗಗಳ ಜೀವನಮಟ್ಟ ಸುಧಾರಣೆ ಹಾಗೂ ಸಮುದಾಯಗಳ ಸಬಲೀಕರಣಕ್ಕಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಇವುಗಳಲ್ಲಿ ಹಸಿವು ಮುಕ್ತ ಜಗತ್ತು, ನಿರ್ಗತಿಕ ಮಕ್ಕಳಿಗಾಗಿ ಮೈಕ್ರೋ ಲರ್ನಿಂಗ್ ಕೇಂದ್ರಗಳು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ಹಾಗೂ ಹಿರಿಯ ಮಹಿಳೆಯರ ಆರೈಕೆಗಾಗಿ ಗ್ರ್ಯಾಂಡ್‌ಮಾ ಹೋಮ್ಸ್ ಪ್ರಮುಖವಾಗಿವೆ.