ಪೌರಕಾರ್ಮಿಕರು ಆರೋಗ್ಯದತ್ತ ಹೆಚ್ಚಿನ ಗಮಹರಿಸಲಿ

ಬೇಲೂರು ಪುರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಶಾಸಕ ಎಚ್.ಕೆ.ಸುರೇಶ್ ಬಟ್ಟೆ ವಿತರಿಸಿದರು. ಬಸವರಾಜ್ ಸಿಗ್ಗಾವಿ, ಜ್ಯೋತಿ ಇತರರಿದ್ದರು.
ಬೇಲೂರು ಪುರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಶಾಸಕ ಎಚ್.ಕೆ.ಸುರೇಶ್ ಬಟ್ಟೆ ವಿತರಿಸಿದರು. ಬಸವರಾಜ್ ಸಿಗ್ಗಾವಿ, ಜ್ಯೋತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್
  • ಪುರಸಭೆ ಆವರಣ

ಬೇಲೂರು:

ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ದಿನದ 24 ಗಂಟೆಯೂ ಸೈನಿಕರಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಶಾಸಕ ಎಚ್.ಕೆ.ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಸಿಬ್ಬಂದಿಗೆ ಬಟ್ಟೆ ವಿತರಿಸಿ ಮಾತನಾಡಿದ ಅವರು, ಗಡಿಯಲ್ಲಿ ಸೈನಿಕರು ಶತ್ರುಗಳನ್ನು ಸದೆ ಬಡಿದು ದೇಶ ರಕ್ಷಿಸುವ ಮಾದರಿಯಲ್ಲಿ ಪೌರಕಾರ್ಮಿಕರು ಮತ್ತು ನೀರು ಸರಬರಾಜುದಾರರು ಹಗಲು ರಾತ್ರಿ ಎನ್ನದೆ, ಆರೋಗ್ಯವನ್ನು ಲೆಕ್ಕಿಸದೆ ಹಾಗೂ ಮಳೆ, ಚಳಿ, ಬಿಸಿಲೆನ್ನದೆ ಕೆಲಸ ನಿರ್ವಹಿಸುತ್ತಾರೆ. ಜತೆಗೆ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಜನತೆಯ ಆರೋಗ್ಯವನ್ನು ಕಾಪಾಡುತ್ತಾರೆ. ಆದ್ದರಿಂದ ಕಾರ್ಮಿಕರು ತಮ್ಮ ಆರೋಗ್ಯದತ್ತಲೂ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮನೆಯಲ್ಲೂ ಮಕ್ಕಳ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಒತ್ತು ನೀಡುವ ಮೂಲಕ ಜೀವನದಲ್ಲಿ ಮುಂದೆ ಬರಬೇಕು. ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಇತರ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಆರೋಗ್ಯಾಧಿಕಾರಿ ಜ್ಯೋತಿ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net