ಪಾಂಡವಪುರ ಪಟ್ಟಣದ ಪುರಸಭೆ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು. ಮಂಗಳಾ ನವೀನ್, ಸತೀಶ್ ಕುಮಾರ್, ಮಂಜುನಾಥ್,ಮಂಜುಳಾ, ನವೀನ್ ಕುಮಾರ್, ರಮೇಶ್, ಸವಿತಾ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ ನವೀನ್
ಪುರಸಭೆ ಆವರಣ
ಪಾಂಡವಪುರ: ಸಮಾಜದ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಮಹತ್ವದ್ದಾಗಿದ್ದು, ಸ್ವಚ್ಛತೆ ಬೆನ್ನೆಲುಬಾಗಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳಾ ನವೀನ್ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪುರಸಭಾ ಅಧಿಕಾರಿ, ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ರಕ್ಷೆ ಕಟ್ಟಿ, ಮಂತ್ರಾಕ್ಷತೆ ಹಾಗೂ ಪುಷ್ಪವೃಷ್ಟಿ ಮಾಡಿ ಸಿಹಿ ತಿನಿಸುವ ಮೂಲಕ ರಕ್ಷಾಬಂಧನದ ಶುಭಾಶಯ ಕೋರಿ, ಬಳಿಕ ಮಾತನಾಡಿ, ಪೌರಕಾರ್ಮಿಕ ಸಹೋದರರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನದ ಶುಭಾಶಯ ಕೋರಲಾಗಿದ್ದು, ಅವರಿಗೆ ಉತ್ತಮ ಆರೋಗ್ಯ ಹಾಗೂ ಸುಖ-ಸಮೃದ್ಧಿ ದೊರೆಯಲಿ ಎಂದು ಹಾರೈಸಿದರು.
ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ. ದೇಶದ ರಕ್ಷಣೆಯಲ್ಲಿ ಸೈನಿಕರು ಹಾಗೂ ಅನ್ನ ನೀಡುವಲ್ಲಿ ರೈತರು ಎಷ್ಟು ಪ್ರಮುಖರೋ, ಅದೇ ರೀತಿ ಜನರ ಆರೋಗ್ಯ ಉತ್ತಮವಾಗಿರಲು ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರೂ ಅಷ್ಟೇ ಮುಖ್ಯ. ಹೀಗಾಗಿ ಅವರ ಸೇವೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.