ಹನೂರು ಶೂಟೌಟ್, ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ: ಡಿಜಿಪಿ ಎಂ.ಎ ಸಲೀಂ ಆದೇಶ! Hanur Shootout Case

ಹನೂರು ಶೂಟೌಟ್, ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ: ಡಿಜಿಪಿ ಎಂ.ಎ ಸಲೀಂ ಆದೇಶ! Hanur Shootout Case
ಹನೂರು ಶೂಟೌಟ್, ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ: ಡಿಜಿಪಿ ಎಂ.ಎ ಸಲೀಂ ಆದೇಶ! Hanur Shootout Case
Published on

ಪ್ರಮುಖ ಮುಖ್ಯಾಂಶಗಳು

  • ಹನೂರು ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಡಿಜಿಪಿ
  • ಕಾವೇರಿ ವನ್ಯಜೀವಿಧಾಮ ಗುಂಡಿನ ದಾಳಿ ಪ್ರಕರಣದ ಸಮಗ್ರ ತನಿಖೆ ಆರಂಭ
  • ಹನೂರು ಹಾಗೂ ರಾಮಾಪುರ ಠಾಣೆಯ ನಾಲ್ಕೂ ಎಫ್ಐಆರ್ ಸಿಐಡಿಗೆ ವರ್ಗಾವಣೆ
  • ಆಗಸ್ಟ್ 15 ರಂದು ಅರಣ್ಯ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಮೂವರು ಸಾವು
  • ಮರಿಯಮಂಗಲ ಶೂಟೌಟ್ ಪ್ರಕರಣದ ಸತ್ಯಾಸತ್ಯತೆ ಶೀಘ್ರವೇ ಹೊರಬೀಳುವ ನಿರೀಕ್ಷೆ
ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆ. 15 ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ( Hanur Shootout Case ) ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಮರಿಯಮಂಗಲ ಬೀಟ್ ನಲ್ಲಿ ನಡೆದಿರುವ ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಸಲೀಂ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಆದೇಶಿಸಿದ್ದಾರೆ.
ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು , ರಾಮಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಾಲ್ಕೂ ಎಫ್‌ಐಆರ್‌ಗಳ ತನಿಖೆಯನ್ನು ಸಹ ಸಿಐಡಿಗೆ ವರ್ಗಾಯಿಸಲಾಗಿದೆ‌.
ಈ ಸಂಬಂಧ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಿಐಡಿಯ ವಿಶೇಷ ಘಟಕದಿಂದ ಮುಂದಿನ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಈ ಸಮಗ್ರ ತನಿಖೆ ನಡೆದ ಬಳಿಕ ಶೂಟೌಟ್​ ಪ್ರಕರಣದ ಸತ್ಯಾಸತ್ಯತೆ ಹೊರಬೀಳುವ ನಿರೀಕ್ಷೆ ಇದೆ.

ಏನಿದು ಪ್ರಕರಣ?

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆಗಸ್ಟ್​ 15ರ ನಸುಕಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ಮೂವರು ಮೃತಪಟ್ಟರು. ಮೃತರನ್ನು ಕಳ್ಳಬೇಟೆಗಾರರು ಎನ್ನಲಾಗಿದೆ. ಬೇಟೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೂ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತರನ್ನು ಹನೂರು ತಾಲೂಕಿನ ಮರಿಯ ಮಂಗಲದ ರೈತ ಆಂತೋಣಿ ಸ್ವಾಮಿ (50), ಜಗನ್ನಾಥ‌ದೊಡ್ಡಿಯ ರೈತ‌ ಜಾನ್ ರೋಸ್ ಪೀಟರ್ (42) , ಲಾಸರ್ದೊಡ್ಡಿಯ‌ ಹಿಟಾಚಿ ಆಪರೇಟರ್ ಕುಮಾರ್(33) ಎಂದು ಗುರುತಿಸಲಾಗಿದೆ. ಆದರೆ, ಮೃತರು ಬೇಟೆಗೆ ಹೋಗಿರಲಿಲ್ಲ, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಯು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕ ಮತ್ತು ತಮಿಳುನಾಡು ವಿಧಾನಸಭೆಯಲ್ಲಿಯೂ ಧ್ವನಿ ಎತ್ತಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net