ಮೆಣಸಿನಕಾಯಿ ತಂದ ಸಿಹಿ

ರೈತನಿಗೆ ಸಿಹಿ ತಂದ ಮೆಣಸಿನಕಾಯಿ
ರೈತನಿಗೆ ಸಿಹಿ ತಂದ ಮೆಣಸಿನಕಾಯಿ
Published on

ಪ್ರಮುಖ ಮುಖ್ಯಾಂಶಗಳು

  • ರೈತನಿಗೆ ಮೆಣಸಿನಕಾಯಿ ತಂದ ಸಿಹಿ
  • ಕಡಿಮೆ ಭೂಮಿಯಲ್ಲಿ ಅಧಿಕ ಆದಾಯ ಕಂಡ ಕೃಷಿಕ
  • ಸಾವಯವ ಬೆಲ್ಲ ಬಳಸಿ ಅಧಿಕ ಇಳುವರಿ
  • ಚಿಕ್ಕೋಡಿ ರೈತನ ಮಾದರಿ ಕೃಷಿ
| ಮೆಣಸಿನಕಾಯಿ ತಂದ ಸಿಹಿ
| ೨೫ ಗುಂಟೆಯಲ್ಲಿ ೪ ಲಕ್ಷ ರೂ.ಗೂ ಅಧಿಕ ಆದಾಯ
ಆನಂದ ಭಮ್ಮನ್ನವರ ಚಿಕ್ಕೋಡಿ
ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವಂತೆ, ಕೃಷಿ ಕ್ಷೇತ್ರದಲ್ಲಿ ರೈತರೇ ಹೊಸ ಹೊಸ ಸಂಶೋಧನೆ ನಡೆಸುವ ಮೂಲಕ ಯಶ ಕಾಣಿತ್ತಿದ್ದಾರೆ
. ಅಂತಹ ಸಾಧನೆಯನ್ನು ಚಿಕ್ಕೋಡಿ ಪಟ್ಟಣದ ರೈತ ಮಹೇಶ ಯಡವನ್ನವರ
ಮಾಡಿದ್ದು, ಇತರರಿಗೆ ಮಾದರಿಯಾಗಿದೆ.
ಮೂಲತಃ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ ಅವರು, ಬೆಳಕೂಡ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಎರಡು ಖರೀದಿಸಿದ ಬರಡು ಜಮೀನು ಅಲ್ಲಿ ಬೋರವೆಲ್ ಕೊರೆಸಿ ತೋಟಗಾರಿಕೆ ಬೆಳೆಯುತ್ತಿದೆ. ೨೫ ಗುಂಟೆಯಲ್ಲಿ ರಾಸಾಯನಿಕ ಬದಲಾಗಿ ಸಾವಯವ ಬೆಲ್ಲ ಬಳಸಿ ಮೆಣಸಿನ ಕಾಯಿ ಬೆಳೆದು ನಾಲ್ಕು ಲಕ್ಷ ರೂ.ಗೂ ಅಕ ಲಾಭ ಗಳಿಸಿದ್ದು, ಇತರರ ಹುಬ್ಬೇರುವಂತೆ ಮಾಡಿದೆ.
ಜನವರಿಯಲ್ಲಿ ಸಿಝಂಟಾ ತಳಿಯ 3,800 ಸಸಿಗಳನ್ನು 25 ಗುಂಟೆ ಜಮೀನಿನಲ್ಲಿ ನಾಟಿ ಮಾಡಲಾಗಿತ್ತು. ಮಲ್ಚಿಂಚ್ ಪೇಪರ್, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು 10 ಟನ್ ಕಾಂಪೋಸ್ಟ್ ಗೊಬ್ಬರ, 3 ಲಾರಿ ಸಗಣಿ ಗೊಬ್ಬರ ಬಳಸಿದ್ದಾರೆ. ಕೀಟನಾಶಕ ಜೊತೆಗೆ ಸಾವಯವ ಬೆಲ್ಲದ ಪಾಕ್ ತಯಾರಿಸಿ ಹನಿ ನೀರಾವರಿ ಮೂಲಕ ಪ್ರತಿ ಬಾರಿ 2 ಕೆಜಿಯಂತೆ 6 ಬಾರಿ ಬೆಳೆಗೆ ನೀಡಲಾಗಿದೆ. ಬೆಳೆ ಗುಣಮಟ್ಟ, ಕಾಂಡದ ಕೊರತೆ, ಬೇರು ಕೊಳೆ ರೋಗ ಸೇರಿದಂತೆ ಅನೇಕ ಸಮಸ್ಯೆಗಳು ನಿವಾರಣೆಯಾಗಿ ಫಸಲು ಚೆನ್ನಾಗಿ ಬಂದಿದೆ. ಕಳೆದ 45 ದಿನಗಳಲ್ಲಿ 6 ಟನ್ ಹಸಿ ಮೆಣಸಿನ ಕಾಯಿಯನ್ನು ಮಾರುಕಟ್ಟೆಗೆ ಕಳುಹಿಸಿದ್ದು, (ಪ್ರತಿ ೧೦ ಕೆಜಿಗೆ ೪೦೦-೮೦೦ ರೂ. ಅಂತೆ) ೨ ಲಕ್ಷ ರೂ. ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ 60-90 ದಿನದವರೆಗೆ ಇಳುವರಿ ಬರಲಿದೆ, ಅಂದಾಜು 2.5 ಲಕ್ಷ ರೂ.ಗೂ ಆದಾಯ ಬರುವ ನಿರೀಕ್ಷೆಯಿದೆ.
೨೫ ಗುಂಟೆ ಮೆಣಸಿನ ಕಾಯಿ ಸಸಿ ನಾಟಿಯಿಂದ ಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿರ ವೇತನ, ಸಾರಿಗೆ ಸೇರಿದಂತೆ ೫೦-೬೦ ಸಾವಿರ ರೂ. ಖರ್ಚಾಗಿದೆ.
---
ಕೋಟ್
ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವ ನನಗೆ ಕೃಷಿ ಕಡೆಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಬೆಳಕೂಡ ಗ್ರಾಮದ ಮಾ ನನ್ನ ಮಾವ ಸುರೇಶ ಮಾಳಿ ಹಾಗೂ ನಿಡಸೋಸಿ ಗ್ರಾಮದ ಸ್ನೇಹಿತ ವಿಶಾಲ ಪಾಟೀಲ ಪ್ರೇರಣೆಯಿಂದ ಅಲ್ಪ ಭೂಮಿಯಲ್ಲಿ ಅಧಿಕ ಆದಾಯ ಕಂಡುಕೊಂಡಿದ್ದೆನೆ.
| ಮಹೇಶ ಯಡವನ್ನವರ ಕೃಷಿಕ, ಚಿಕ್ಕೋಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net