ರಾಮದುರ್ಗ: ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ಸಂಸತಿ, ಇತಿಹಾಸದ ಮಹತ್ವ ತಿಳಿಸಿ, ಅವರ ಜೀವನ ರೂಪಿಸುವಲ್ಲಿ ಶಿಕರ ಪಾತ್ರ ಮುಖ್ಯವಾಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಎಸ್.ಕಟ್ಟೇಕಾರ ಹೇಳಿದರು. ನಗರದ ವಿಪಿಎಸ್ ಶಿಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ರಶಿಣಾರ್ಥಿಗಳ ಸ್ವಾಗತ, ಸಾಂಸತಿಕ, ಕ್ರೀಡಾ ಹಾಗೂ ವಿದ್ಯಾರ್ಥಿ ಸಂಪತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾ ಪ್ರಸಾರಕ ಸಮಿತಿ ಅಧ್ಯ ಪಿ.ಎಂ.ಜಗತಾಪ ಮಾತನಾಡಿದರು. ಸಂಸ್ಥೆಯ ಹಿರಿಯ ಸದಸ್ಯ ವಿ.ಜಿ.ಬೈಲವಾಡ, ಆರ್.ಪಿ.ಜಗತಾಪ, ಸದಸ್ಯರಾದ ಶಿವಾನಂದ ಚಿಕ್ಕೋಡಿ, ಎಸ್.ಬಿ.ಸೊಬರದ, ಪ್ರೊ.ಎಸ್.ಲೇಪಾ, ಜಿ.ಬಿ.ಬಟಕುರ್ಕಿ ಇತರರಿದ್ದರು.