ಮಕ್ಕಳ ಬಾಲ್ಯವನ್ನು ನಾವೆಲ್ಲರೂ ಕಿತ್ತುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಚೇತೋಹಾರಿ ತರಗತಿಗಳ ವಾತಾವರಣ ನಿರ್ಮಿಸುವ ಅಗತ್ಯವಿದೆ. ಆದರೆ, ಇವತ್ತಿನ ದಿನಮಾನಗಳಲ್ಲಿ ಅಂಕ ತಯಾರಿಸುವ ಕಾರ್ಖಾನೆಯಂತೆ ಮಕ್ಕಳನ್ನು ಬೆಳೆಸಲಾಗುತ್ತಿದೆ. ಮಕ್ಕಳ ಸಹಜ ಆಸೆ, ಆಕಾಂಕ್ಷೆ ತಿಳಿದು ಚಟುವಟಿಕೆಗಳ ಮೂಲಕ ಸುಲಭವಾಗಿ ಕಲಿಸುವ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಸಂಯೋಜಿತ ಜ್ಞಾನದ ರುಚಿಯನ್ನು ನೀಡುತ್ತಾ, ಅರಿವಿನ ಆನಂದ ಸವಿಯುವಂತೆ ಮಾಡಬೇಕು. ಮಕ್ಕಳಲ್ಲಿ ದೈನಂದಿನ ಅನುಭವಗಳನ್ನು ಸೂಕ್ಷ್ಮವಾಗಿ ನೋಡಿ ವಿಶ್ಲೇಷಿಸುವ ಪ್ರವೃತ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.