ನೆಲಮಂಗಲ ತಾಲೂಕಿನ ಕೆಪಿಎಸ್ ಶಾಲೆಯಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ ಗ್ರಾಪಂ ಅಧ್ಯೆ ಉಮಾ ಹರೀಶ್ ಉದ್ಘಾಟಿಸಿದರು. ಕೆಪಿಎಸ್ ಉಪ ಪ್ರಾಂಶುಪಾಲೆ ಪದ್ಮಾವತಿ, ಮುಖ್ಯಶಿಕ್ಷಕಿ ಸುಮಂಗಳಾ. ಮುಖ್ಯಶಿಕ್ಷಕ ಗೋವಿಂದರಾಜು, ದೈಹಿಕ ಶಿಕ್ಷಕ ಮಂಜುನಾಥ್, ಸುಕನ್ಯಾ, ಎಸ್ಡಿಎಂಸಿ ಅಧ್ಯಕ್ಷ ಸೋಮಶೇಖರ್ ಇದ್ದರು.
Published on:
Copied
Follow Us
ತ್ಯಾಮಗೊಂಡ್ಲು : ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಅವಕಾಶ ನೀಡಿದರೆ ಪ್ರಪಂಚವನ್ನೇ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಾರೆ ಎಂದು ತ್ಯಾಮಗೊಂಡ್ಲು ಗ್ರಾಪಂ ಅಧ್ಯೆ ಉಮಾ ಹರೀಶ್ ಹೇಳಿದರು. ನೆಲಮಂಗಲ ತಾಲೂಕಿನ ಕೆಪಿಎಸ್ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಿಂದ ಆಯೋಜಿಸಿದ್ದ ತ್ಯಾಮಗೊಂಡ್ಲು ಮತ್ತು ಕಳಲುಟ್ಟ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಸ್ಪರ್ಧಿಸಿದ ಎಲ್ಲರೂ ವಿಜೇತರಾಗಲು ಸಾಧ್ಯವಿಲ್ಲ. ಉತ್ತಮ ಪ್ರದರ್ಶನ ನೀಡಿದವರು ಬಹುಮಾನ ಪಡೆದರೂ ಬೇರೆಯವರು ಉತ್ತಮರಲ್ಲ ಎಂದಲ್ಲ. ನಾಳೆ ಅವರೂ ಬಹುಮಾನ ಪಡೆಯಲು ಅವಕಾಶವಿದೆ. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಹೊರತರುವುದು ಕಾರಂಜಿಯ ಮುಖ್ಯ ಉದ್ದೇಶ. ಶಾಲೆಗಳಲ್ಲಿ ಪೂರಕ ವಾತಾವರಣ ಒದಗಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಸೋಮಶೇಖರ್ ಹೇಳಿದರು. ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿ ಒಟ್ಟು 18 ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.