ಮಕ್ಕಳ ಜ್ಞಾನಾರ್ಜನೆಗೆ ವಿದ್ಯಾರ್ಥಿ ಮಿತ್ರ ಸಹಕಾರಿ

ಕೊಳವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗ್ರಾಪಂ ವತಿಯಿಂದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಲಾಯಿತು. ಡಾ.ಮೋಹನ ಭಸ್ಮೆ, ಪರಶುರಾಮ ಸ್ತೆ, ಡಿ.ಎಸ್​.ಕುಡವಕ್ಕಲಿಗ, ಭಾರತಿ ಕುಳ್ಳೂರ, ಎಂ.ಬಿ.ಮುತ್ನಾಳ, ಕರೆಪ್ಪ ಬಡಿಗವಾಡ, ಶಂಕರ ವನಕಿ ಇತರರಿದ್ದರು.
ಕೊಳವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗ್ರಾಪಂ ವತಿಯಿಂದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಲಾಯಿತು. ಡಾ.ಮೋಹನ ಭಸ್ಮೆ, ಪರಶುರಾಮ ಸ್ತೆ, ಡಿ.ಎಸ್​.ಕುಡವಕ್ಕಲಿಗ, ಭಾರತಿ ಕುಳ್ಳೂರ, ಎಂ.ಬಿ.ಮುತ್ನಾಳ, ಕರೆಪ್ಪ ಬಡಿಗವಾಡ, ಶಂಕರ ವನಕಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮಮದಾಪುರ
ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯು ಸ್ಪರ್ಧಾತ್ಮಕ ಪರೀೆಗಳ ಮಾರ್ಗದರ್ಶನ, ಪ್ರಚಲಿತ ವಿದ್ಯಮಾನ ಹಾಗೂ ಶೈಣಿಕ ಮಾಹಿತಿ ಒದಗಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದು ಗೋಕಾಕ ದಂಡಾಧಿಕಾರಿ ಡಾ.ಮೋಹನ ಭಸ್ಮೆ ಹೇಳಿದರು.
ಕೊಳವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗ್ರಾಪಂ ವತಿಯಿಂದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಪ್ರಮುಖವಾಗಿದೆ. ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿ ಸಮಚಿತ್ತದಿಂದ ಓದಿನತ್ತ ಗಮನಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಪಂ ಇಒ ಪರಶುರಾಮ ಸ್ತೆ ಮಾತನಾಡಿ, ಗ್ರಾಪಂ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಂಟು ತಿಂಗಳವರೆಗೆ ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಿಕರ ಬೋಧನೆ ಜತೆಗೆ ಪತ್ರಿಕೆಯಲ್ಲಿ ದಿನನಿತ್ಯ ಪ್ರಕಟಣೆಗೊಳ್ಳುವ ವಿಷಯ ಸಂಗ್ರಹಿಸಿ ಪರೀೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಬೇಕೆಂದರು.
ಗ್ರಾಪಂ ಆಡಳಿತ ಅಧಿಕಾರಿ ಹಾಗೂ ಸಿಡಿಪಿಒ ಡಿ.ಎಸ್​.ಕುಡವಕ್ಕಲಿಗ, ಗ್ರಾಪಂ ಎಸ್​.ಡಿ.ಎ.ಭಾರತಿ ಕುಳ್ಳೂರ, ಮುಖ್ಯ ಶಿಕ ಎಂ.ಬಿ.ಮುತ್ನಾಳ, ಗ್ರಾಪಂ ಮಾಜಿ ಅಧ್ಯ ಕರೆಪ್ಪ ಬಡಿಗವಾಡ, ಪಿಕೆಪಿಎಸ್​ ಮಾಜಿ ಅಧ್ಯ ಶಂಕರ ವನಕಿ, ಶಿವಾನಂದ ಮಮದಾಪುರ, ಶಿಕರಾದ ಅಸ್ಲಾಂ ನಗಾರ್ಚಿ, ಕುಮಾರ ಬಡಿಗೇರ, ಮಹೇಶ್ವರಿ ಸರಕಪ್ಪಗೊಳ, ಸರೋಜಿನಿ ಬೆಂಡವಾಡ, ಸುಮಿತ್ರಾ ಪತ್ತಾರ, ಎಸ್​ ಬಳ್ಳಾರಿ, ವರದಿಗಾರ ಸಂಗಮೇಶ ಅಂಗಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net