ಹೃದಯ ಸ್ತಂಭನದಿಂದ ಮಗು ಸಾವು

Child dies of cardiac arrest
Child dies of cardiac arrest
Published on
ಶಿರಾ: ಶಿರಾದಲ್ಲಿ ವೈದ್ಯರೊಬ್ಬರು ಮಗುವಿಗೆ ಚಿಕಿತ್ಸೆ ನೀಡುವಾಗ ಸಂಭವಿಸಿದ ಮಗುವಿನ ಸಾವಿನ ಬಗ್ಗೆ ಆ ವೈದ್ಯರ ಮೇಲೆ ಇಲ್ಲಸಲ್ಲದ ಆರೋಪ ವಾಡಲಾಗಿತ್ತು. ಆದರೆ, ತನಿಖಾ ವರದಿ ನಂತರ ವೈದ್ಯರ ತಪ್ಪಿಲ್ಲವೆಂದು ತಿಳಿದು ಬಂದಿದ್ದರೂ ಸಾವಾಜಿಕ ಜಾಲತಾಣಗಳಲ್ಲಿ ಆ ವಿಷಯ ಪ್ರಸ್ತಾವನೆ ಆಗುತ್ತಿರುವುದರಿಂದ ವೈದ್ಯರಿಗೆ ತೊಂದರೆಯಾಗುತ್ತಿದೆ ಎಂದು ಶಿರಾ ತಾಲೂಕು ವೈದ್ಯರ ಸಂದ ಅಧ್ಯಕ್ಷೆ ಡಾ.ವಾಲಿನಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಶಿರಾದಲ್ಲಿ 2025ರ ಮೇ 24ರಂದು ಖಾಸಗಿ ಆಸ್ಪತ್ರೆಯಲ್ಲಿ ಡಾ. ನವೀನ್, ನವಜಾತ ಶಿಶುವಿಗೆ ಚಿಕಿತ್ಸೆ ನಡೆಸಿ, ತುರ್ತು ಪರಿಸ್ಥಿತಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಬಾಣಂತಿಯ ಪಥ್ಯದಿಂದ ಹಾಲಿನಲ್ಲಿ ಥಯಾಮಿನ್ ಎಂಬ ವಿಟಮಿನ್ ಕೊರತೆಯಿಂದ ಮಕ್ಕಳಲ್ಲಿ ಹೃದಯ ಸ್ತಂಭನವಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ವೈದ್ಯರು ನೀಡಿದ ಓವರ್ ಡೋಸೇಜ್‌ನಿಂದ ಮೃತಪಟ್ಟಿದೆ ಎಂದು ಪಾಲಕರು, ಸಂಬಂಧಿಕರು ಸತ್ಯ ತಿಳಿಯದೆ ವೈದ್ಯರ ವಿರುದ್ಧ ಆರೋಪ ವಾಡಿದ್ದರು. ಈಗ ವೈದ್ಯಕೀಯ ಮರಣೋತ್ತರ ವರದಿ ಬಂದಿದ್ದು, ಹೃದಯ ಸ್ತಂಭನದಿಂದ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ ಎಂದರು.
ವೈದ್ಯರು ಜೀವ ರಕ್ಷಕರು. ಜೀವ ತೆಗೆಯುವರಲ್ಲ, ಸವಾಜದ ಸೇವೆಗೆ ಮುಂದಾಗಿರುವ ವೈದ್ಯರ ಹೆಸರಿಗೆ ಕಳಂಕ ತರಬಾರದು ಎಂದು ತಿಳಿಸಿದರು. ಡಾ.ರಾಮಕೃಷ್ಣ, ಡಾ.ಮಂಜುನಾಥ್, ಡಾ.ಸಿದ್ದೇಶ್ವರ, ಡಾ. ಚಿಕ್ಕಣ್ಣ, ಡಾ.ನವೀನ್, ಡಾ. ಶ್ರೀಕಾಂತ್, ಡಾ. ದರ್ಶನ್, ಡಾ.ಭಾಸ್ಕರ್ ಬಾಬು, ಡಾ.ಶೃತಿ, ಡಾ. ವಿನಯ್ ಕುವಾರ್ ಸಿಂಗ್, ಡಾ.ದರ್ಶನ್, ಡಾ.ವಿನಯ್, ಡಾ.ಅನ್ನಪೂರ್ಣ, ಡಾ.ನಿತಿನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net