ಮಾಸ್ಟರ್ಸ್​ ಅಥ್ಲೆಟಿಕ್ಸ್​ನಲ್ಲಿ ಚೆನ್ನಮ್ಮಗೆ 2 ಚಿನ್ನದ ಪದಕ

Channamma Hede
Channamma Hede
Published on
ಧಾರವಾಡ: ಕರ್ನಾಟಕ ರಾಜ್ಯ ಮಾಸ್ಟರ್ಸ್​ ಅಥ್ಲೆಟಿಕ್ಸ್​ ಅಸೋಸಿಯೇಷನ್​ ಹಾಗೂ ಕೋಲಾರ ಜಿಲ್ಲಾ ಮಾಸ್ಟರ್ಸ್​ ಅಥ್ಲೆಟಿಕ್ಸ್​ ಅಸೋಸಿಯೇಷನ್​ ಆಶ್ರಯದಲ್ಲಿ ಕೋಲಾರದ ಸರ್​ ಎಂ. ವಿಶ್ವೇಶ್ವರಯ್ಯ ಕ್ರೀಡಂಗಣದಲ್ಲಿ ಇತ್ತೀಚೆಗೆ ಜರುಗಿದ 44ನೇ ರಾಜ್ಯ ಮಟ್ಟದ ಮಾಸ್ಟರ್ಸ್​ ಅಥ್ಲೆಟಿಕ್ಸ್​ನಲ್ಲಿ ಕ್ರೀಡಾಕೂಟದಲ್ಲಿ ಇಲ್ಲಿನ ಚೆನ್ನಬಸವೇಶ್ವರನಗರ ನಿವಾಸಿ, 74 ವರ್ಷದ ನಿವೃತ್ತ ಅಧ್ಯಾಪಕಿ ಚೆನ್ನಮ್ಮ ಹೆಡೆ ಬೈಲೂರ 2 ಚಿನ್ನದ ಪದಕ ಪಡೆದಿದ್ದಾರೆ.
ಹ್ಯಾಮರ್​ ಥ್ರೋ ಸ್ಪರ್ಧೆಯಲ್ಲಿ 14.58 ಮೀ. ದೂರ ಎಸೆದು ಪ್ರಥಮ ಸ್ಥಾನ ಪಡೆದರು. ಟ್ರಿಪ್ಪಲ್​ ಜಂಪ್​ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕ ಪಡೆದರು. ಅಥ್ಲೆಟಿಕ್ಟ್​ ಅಸೋಸಿಯೇಷನ್​ ಅಧ್ಯಕ್ಷ ಡಿ. ಡೇವಿಡ್​ ಪ್ರೇಮನಾಥ ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net