ದುಬಾರೆಯಲ್ಲಿ ಮಹಿಳೆ ಮೈಮೇಲೆ ಬಿದ್ದ ಸಾಕಾನೆ! ಸ್ಥಳದಲ್ಲೇ ಉಸಿರು ಚೆಲ್ಲಿದ ಚೆನ್ನೈ ಪ್ರವಾಸಿ

ದಬಾರೆಯಲ್ಲಿ ಆನೆ ಮೈಮೇಲೆ ಬಿದ್ದು ಮಹಿಳೆ ಸಾವು
ದಬಾರೆಯಲ್ಲಿ ಆನೆ ಮೈಮೇಲೆ ಬಿದ್ದು ಮಹಿಳೆ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಸಾಕಾನೆ ಮೈಮೇಲೆ ಬಿದ್ದು ಚೆನ್ನೈ ಮೂಲದ ಪ್ರವಾಸಿ ದುರಂತ ಸಾವು
  • ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ದುರ್ಘಟನೆ
ಕುಶಾಲನಗರ: ಎಲಿಫೆಂಟ್​ ಬಾತಿಂಗ್ ವೀಕ್ಷಿಸಲು ಹೋದಾಗ ಸಾಕಾನೆ ಮೈಮೇಲೆ ಬಿದ್ದು ಮಹಿಳೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ಸಂಭವಿಸಿದೆ.
ದುಬಾರೆಗೆ ಆಗಮಿಸಿದ್ದ ಚೆನ್ನೈನ ಪಲ್ಲಾವರಂ ಮೂಲದ ಮಹಿಳೆ ಸಾವಿಗೀಡಾಗಿದ್ದಾರೆ. ಆನೆಗಳನ್ನು ನೋಡಲು ಜನರ ಮೆಚ್ಚಿನ ಪ್ರೇಕ್ಷಣೀಯ ಸ್ಥಳವಾದ ಕಾರಣ, ಪ್ರವಾಸಿಗರೊಡನೆ ಎಲಿಫೆಂಟ್ ಬಾತಿಂಗ್ ನೋಡಲು ಬಂದಿದ್ದ ಮಹಿಳೆ ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.

ಆನೆಗಳ ಕಾದಾಟಕ್ಕೆ ಹೋಯಿತು ಮಹಿಳೆಯ ಪ್ರಾಣ

ಕಂಜನ್​ ಮತ್ತು ಮಾರ್ತಾಂಡ ಆನೆಗಳು ನದಿಯಲ್ಲಿ ದಿಢೀರ್​ ಕಾದಾಟಕ್ಕಿಳಿಯಿತು. ಈ ವೇಳೆ ದಂತ ತಿವಿದ ಕಾರಣ ಸಾಕಾನೆಗೆ ಪ್ರವಾಸಿ ಮೇಲೆ ಬಿದ್ದಿದೆ. ಮೇಲೇಳಲು ಪರದಾಡಿದ ಚೆನ್ನೈ ಮೂಲದ ಪ್ರವಾಸಿಯನ್ನು ಅಲ್ಲಿಂದ ಪಾರು ಮಾಡಲು ಮಾವುತರು ಹರಸಾಹಸ ಪಟ್ಟಿದ್ದೇ ಆದರೂ ಚಿಕಿತ್ಸೆ ಫಲಿಸದೆ ಮಹಿಳೆ ದುರಂತ ಸಾವಿಗೀಡಾಗಿದ್ದಾರೆ.
ಆನೆ ಅಡಿ ಸಿಲುಕಿ ಸಾವನ್ನಪ್ಪಿದ ಮಹಿಳೆಯನ್ನು ಚೆನ್ನೈ ಪಲ್ಲಾವರಂ ಜಿನ್ನು (33) ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ, ಆಕೆಯ ಪತಿ ಜೋಯಲ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net