ನದಿ ದಡದಲ್ಲಿ ನಿಂತಿದ್ದ ಮಹಿಳೆ ಆನೆ ಅಡಿಗೆ ಸಿಲುಕಿದ್ದು ಹೇಗೆ? ಚೆನ್ನೈ ಪ್ರವಾಸಿಯ ಸಾವಿನ ಹಿಂದಿರೋ ಅಸಲಿ ಸತ್ಯ ಬಯಲು

ದುಬಾರೆಯಲ್ಲಿ ಆನೆ ಕಾದಾಟಕ್ಕೆ ಸಿಲುಕಿ ಪ್ರವಾಸಿ ಸಾವು
ದುಬಾರೆಯಲ್ಲಿ ಆನೆ ಕಾದಾಟಕ್ಕೆ ಸಿಲುಕಿ ಪ್ರವಾಸಿ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ದುರಂತ ಸಾವು
  • ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ದುರ್ಘಟನೆ
  • ಎರಡು ಆನೆಗಳ ಕಾದಾಟಕ್ಕೆ ಪ್ರವಾಸಿ ಜಿನ್ಶು ದುರ್ಮರಣ
ಕುಶಾಲನಗರ: ಎಲಿಫೆಂಟ್​ ಬಾತಿಂಗ್ ವೀಕ್ಷಿಸಲು ಹೋದಾಗ ಸಾಕಾನೆ ಮೈಮೇಲೆ ಬಿದ್ದು ಚೆನ್ನೈ ಮೂಲದ ಮಹಿಳೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ಸಂಭವಿಸಿದೆ.  
ದುಬಾರೆ ಆನೆ ಶಿಬಿರದಲ್ಲಿ ಆನೆಗಳನ್ನು ನೋಡಲು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಈ ಸಂದರ್ಭದಲ್ಲಿ, ಎಲಿಫೆಂಟ್​ ಬಾತಿಂಗ್​ ನೋಡಲು ಮುಂದಾದ ಚೆನ್ನೈ ಮೂಲದ ದಂಪತಿ ಮೇಲೆ ಕಂಜನ್​ ಮತ್ತು ಮಾರ್ತಾಂಡ ಆನೆಗಳ ಕಾದಾಟದಲ್ಲಿ ಸಾಕಾನೆ ಕೆಳಗೆ ಬಿದ್ದಿದೆ. ಆನೆ ಮಧ್ಯೆ ಸಿಲುಕಿದ ಮಹಿಳೆ ಉಸಿರು ಚೆಲ್ಲಿದರೆ, ಪತಿ ಗಂಭೀರ ಗಾಯಗಳಿಂದ ಬದುಕುಳಿದಿದ್ದಾರೆ.  

ದೈತ್ಯ ಆನೆಗಳ ಕಾದಾಟಕ್ಕೆ ಮಹಿಳೆ ಸಾವು

ಕಂಚನ್​ ಮತ್ತು ಮಾರ್ತಾಂಡ ಆನೆಗಳು ನದಿಯಲ್ಲಿ ದಿಢೀರ್​ ಕಾದಾಟಕ್ಕಿಳಿಯಿತು. ಈ ವೇಳೆ, ರಭಸವಾಗಿ ಹಿಂದೆ-ಮುಂದೆ ತಳ್ಳಾಡಿದ ದೈತ್ಯ ಗಜಗಳು, ಸಾಕಾನೆಗೆ ತಿವಿದಿದೆ. ಕೂಡಲೇ ಆಯಾತಪ್ಪಿ ಪ್ರವಾಸಿ ಜಿನ್ಶು ಮೇಲೆ ಬಿದ್ದಿದೆ. ಮೇಲೇಳಲು ಪರದಾಡಿದ ಚೆನ್ನೈ ಮೂಲದ ಪ್ರವಾಸಿಯನ್ನು ಅಲ್ಲಿಂದ ಪಾರು ಮಾಡಲು ಮಾವುತರು ಹರಸಾಹಸ ಪಟ್ಟಿದ್ದೇ ಆದರೂ ಚಿಕಿತ್ಸೆ ಫಲಿಸದೆ ಮಹಿಳೆ ದುರಂತ ಸಾವಿಗೀಡಾಗಿದ್ದಾರೆ.  

ಪತಿ ಅಳಲು

ಆನೆಗಳ ಕಾದಾಟಕ್ಕೆ ಸಿಲುಕಿ ಪತ್ನಿ ಮೃತಪಟ್ಟಿದ್ದಾಗಿ ಹೇಳಿರುವ ಗಂಡ, ನಾವು ತಮಿಳುನಾಡಿನಿಂದ ಕುಶಾಲನಗರಕ್ಕೆ ಪ್ರವಾಸ ಬಂದಿದ್ದೆವು. ಎಲ್ಲರಂತೆ ಆನೆಗಳನ್ನು ನೋಡಲು ಹೋದಾಗ ಕಾಡಾನೆಗಳು ಜಗಳಕ್ಕೆ ಬಿದ್ದವು. ಈ ಮಧ್ಯೆ, ಸಿಲುಕಿಕೊಂಡ ಪತ್ನಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಣ್ಣೀರಿಟ್ಟರು. ಹೆಂಡತಿಯನ್ನು ಪಾರು ಮಾಡಲು ಸಾಧ್ಯವಾಗದಿದ್ದರೂ ಮಗುವನ್ನು ಉಳಿಸಿಕೊಳ್ಳುವಲ್ಲಿ ಅವರು ದಿಟ್ಟತನ ತೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net