ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾಗಮಂಡಲ ಕೆವಿಜಿ ಐಟಿಐ ಸಭಾಂಗಣದಲ್ಲಿ ದಿ.ಪಾಣತಲೆ ಅಣ್ಣಯ್ಯ ಮತ್ತು ಶ್ರೀಮತಿ ಚಿಣ್ಣಮ್ಮ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾಗಮಂಡಲ ಕೆವಿಜಿ ಐಟಿಐ ಸಭಾಂಗಣದಲ್ಲಿ ದಿ.ಪಾಣತಲೆ ಅಣ್ಣಯ್ಯ ಮತ್ತು ಶ್ರೀಮತಿ ಚಿಣ್ಣಮ್ಮ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು.
Published on
ನಾಪೋಕ್ಲು: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾಗಮಂಡಲ ಕೆವಿಜಿ ಐಟಿಐ ಸಭಾಂಗಣದಲ್ಲಿ ದಿ.ಪಾಣತಲೆ ಅಣ್ಣಯ್ಯ ಮತ್ತು ಶ್ರೀಮತಿ ಚಿಣ್ಣಮ್ಮ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಐಟಿಐ ಕಾಲೇಜಿನ ಪ್ರಾಂಶುಪಾಲ ಕೆ.ವಿ. ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಅರಿವು ಮೂಡುತ್ತದೆ. ಅಲ್ಲದೆ ಸಾಹಿತ್ಯ ಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ದತ್ತಿ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧಡೆ ನಡೆಸುವುದರಿಂದ ಆ ಭಾಗದಲ್ಲೂ ದತ್ತಿದಾನಿಗಳ ಪರಿಚಯವಾಗುತ್ತದೆ ಹಾಗೂ ಇತರರಿಗೆ ಪ್ರೇರಣೆಯೂ ಆಗುತ್ತದೆ. ವಿದ್ಯಾರ್ಥಿಗಳು ದತ್ತಿ ಉಪನ್ಯಾಸದಲ್ಲಿ ನೀಡುವ ಉಪನ್ಯಾಸದ ವಿಚಾರಗಳನ್ನು ಮೈಗೂಡಿಸಿಕೊಂಡು ಮುಂದೆ ಉದ್ಯೋಗಸ್ಥರಾಗಿ ತಾವು ಕೂಡ ಯಾವುದಾದರೂ ಕ್ಷೇತ್ರದಲ್ಲಿ ದತ್ತಿನಿಧಿ ಸ್ಥಾಪನೆ ಮಾಡುವ ಮನಸ್ಸು ಮಾಡಬೇಕು ಎಂದರು.
ಕಾವೇರಿ ಹರಿಯುತ್ತಾ ಹೇಗೆ ರೈತರಿಗೆ, ಪರಿಸರಕ್ಕೆ ಗಣಿಯಾಗುತ್ತಾಳೋ ಅದೇ ರೀತಿ ಸಾಹಿತಿಗಳು ಕನ್ನಡ ಸಾಹಿತ್ಯದ ಇತಿಹಾಸದ ಗಣಿ ಸ್ಥಾಪಿಸಿದ್ದಾರೆ ಎಂದು ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ವಿ.ವಿ. ಶಿವಪ್ಪ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕೊಡಗಿನ ಸಾಹಿತಿಗಳ ಕೊಡುಗೆ ವಿಷಯದಲ್ಲಿ ದತ್ತಿ ಉಪನ್ಯಾಸ ನೀಡಿದ ಅವರು, ಕೊಡಗಿನ ಎಲ್ಲ ಸಾಹಿತಿಗಳ ಪರಿಚಯದೊಂದಿಗೆ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯನ್ನೂ ಸ್ಮರಿಸಿಕೊಂಡು ಮಾತನಾಡಿದರು.
ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನಿಲ್ ಪತ್ರಾವೋ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆವಿಜಿ ಐಟಿಐ ಕಚೇರಿ ಅಧೀಕ್ಷ ಸಿ.ಕೆ. ವಿನೋದ್, ಎಸ್.ಎಸ್. ಸಂಪತ್ ಕುಮಾರ್, ಪಾಣತಲೆ ಲೋಕನಾಥ ಅವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net