ಚರಮೂರ್ತೀಶ್ವರ ಸ್ವಾಮೀಜಿ ಲಿಂಗೈಕ್ಯ

 ಚರಮೂರ್ತೀಶ್ವರ ಸ್ವಾಮೀಜಿ
ಚರಮೂರ್ತೀಶ್ವರ ಸ್ವಾಮೀಜಿ
Published on
ಮಮದಾಪುರ: ಗೋಕಾಕ ತಾಲೂಕಿನ ಮಮದಾಪುರ ಗ್ರಾಮದ ಚರಮೂರ್ತೀಶ್ವರ ಮಹಾಮಠದ ಚರಮೂರ್ತೀಶ್ವರ ಸ್ವಾಮೀಜಿ (79) ಶನಿವಾರ ಲಿಂಗೈಕ್ಯರಾದರು. ಶ್ರೀಗಳಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. 1947 ೆಬ್ರವರಿ 10ರಂದು ಬಡ ಕುಟುಂಬದ ಬಸಲಿಂಗಯ್ಯ&ಅನ್ನಪೂರ್ಣಾ ದಂಪತಿ ಪುಣ್ಯ ಗರ್ಭದಲ್ಲಿ ಜನಿಸಿದರು. ನಿಡಸೋಸಿ ದುರದುಂಡೀಶ್ವರ ಮಠದಲ್ಲಿ ಶಿಣ ಪೂರೈಸಿ, ಸರ್ವ ಜನಾಂಗದ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದರು. ಮಹಾಮಠದಲ್ಲಿ ವಿವಿಧ ಧರ್ಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಮಠದ ಉತ್ತರಾಧಿಕಾರಿಯಾಗಿ ಶ್ರೀಗಳ ಕಿರಿಯ ಪುತ್ರ ಡಾ.ಸಿದ್ಧಲಿಂಗ ದೇವರು ಮಠದ ಪರಂಪರೆ ಮುನ್ನಡೆಸಲಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕಾಗಿ ಮಠದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಸಂಜೆ 6 ಗಂಟೆಗೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿತು. ಹರಳಿಕಟ್ಟಿ ನಿಜಗುಣ ಸ್ವಾಮೀಜಿ, ದಯಾನಂದ ಸರಸ್ವತಿ ಸ್ವಾಮೀಜಿ, ಮರೆಗುದ್ದಿ ನಿರುಪಾದೀಶ್ವರ ಸ್ವಾಮೀಜಿ, ಸಹಜಾನಂದ ಸ್ವಾಮೀಜಿ, ಗೋಕಾಕನ ಮುರುರಾಜೇಂದ್ರ ಸ್ವಾಮೀಜಿ, ಸುವರ್ಣಾ ತಾಯಿ ಹೊಸಮಠ, ಅಂಕಲಗಿ ಅಮರಸಿದ್ಧೇಶ್ವರ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುರಾಜೇಂದ್ರ ಸ್ವಾಮೀಜಿ, ಮೌನಮಲ್ಲಿಕಾರ್ಜುನ ಶಿವಯೋಗಿಗಳು, ಶಾಂತಾರೂಢ ಸ್ವಾಮೀಜಿ, ತವಗಮಠದ ಮುದಿಬಾಳಯ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಮುಖಂಡರಾದ ಅಶೋಕ ಪೂಜಾರ, ಸವೋರ್ತ್ತಮ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು, ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net