ಇಡೀ ಜಗತ್ತಿಗೆ ದಾರಿ ದೀಪವಾದ ಚಂದ್ರಯಾನ!

Chandrayaan: A guiding light for the entire world!
Chandrayaan: A guiding light for the entire world!
Published on
ಚಿಂತಾಮಣಿ: ಜಾಗತಿಕವಾಗಿ ಬಾಹ್ಯಾಕಾಶ ರಂಗದಲ್ಲಿ ಭಾರತದ ಇಸ್ರೋ ಸಂಸ್ಥೆಯು ಚಂದ್ರನ ಅನ್ವೇಷಣೆಯಲ್ಲಿ ನಡೆಸಿರುವ ಸರಣಿ ಪ್ರಯೋಗಗಳು ಯಶಸ್ಸಿನ ಕಥೆಯಷ್ಟೇ ಅಲ್ಲ, ಅದು ಜಗತ್ತಿಗೆ ಚಂದ್ರನ ರಹಸ್ಯಗಳನ್ನು ಬಿಚ್ಚಿಟ್ಟ ಹೆಮ್ಮೆಯ ಹಾದಿ ಎಂದು ಡಿಆರ್​ಡಿಒ ಮಾಜಿ ಹಿರಿಯ ಸಂಶೋಧನಾ ಸಹೋದ್ಯೋಗಿ, ಬೆಂಗಳೂರಿನ ಕಾಲಿನ್ಸ್​ ಏರೋಸ್ಪೇಸ್​ ಸಂಸ್ಥೆ ಹಿರಿಯ ಪ್ರಮುಖ ಏರೋ ಸ್ಪೇಸ್​ ಇಂಜಿನಿಯರ್​ ಪ್ರದಿಪ್​ ಲಕ್ಷ$್ಮಣ್​ ಸವಳ್ಕರ್​ ತಿಳಿಸಿದರು.
ನಗರದ ಶಾಕ್ಯ ಗ್ಲೋಬಲ್​ ಅಕಾಡೆಮಿ ಆವರಣದಲ್ಲಿ ಸ್ಪೇಸ್​ ಆನ್​ ವೀಲ್ಸ್​ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನ, ರಕ್ಷಣೆ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪ್ರಾಯೋಜಿತ ಪ್ರತಿಷ್ಠಿತ ರಾಷ್ಟ್ರೀಯ ಉಪಕ್ರಮ 'ಸ್ಪೇಸ್​ ಆನ್​ ವೀಲ್ಸ್​' ಪ್ರದರ್ಶನ ನಡೆಸುತ್ತಿದೆ ಎಂದರು.
ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಮತ್ತು ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲು ಉಪಗ್ರಹಗಳ ಮಾಹಿತಿಯಿಂದ ತುಂಬಿರುವ ಸ್ಯಾಟಲೈಟ್​ ಬಸ್​ನ್ನು ವೀಸುತ್ತಿರುವ ವಿದ್ಯಾರ್ಥಿಗಳು.
ಇಸ್ರೋ ವಿಜ್ಞಾನ ಉಮಾವತಿ ಮಾತನಾಡಿ, ಭೂಮಿಯ ಮೇಲೆ ಮನೆ ಕಟ್ಟುವಂತೆ, ಮಹಾಕಾಶದಲ್ಲಿ ಭಾರತದ್ದೇ ಆದ ಸ್ವಂತ ಮನೆಯೊಂದನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ 2035ರ ವೇಳೆಗೆ ಭಾರತೀಯ ಅಂತರಿಕ್ಷ ಸ್ಟೇಷನ್​ ಸ್ಥಾಪಿಸಲು ಅಗತ್ಯವಿರುವ ಸಿದ್ಧತೆಗಳು ಮತ್ತು ಯೋಜನೆಗಳು ಭರದಿಂದ ಸಾಗುತ್ತಿವೆ ಎಂದು ತಿಳಿಸಿದರು.

ಶಾಲಾ ಆವರಣಕ್ಕೆ ಬಂದ 'ಸ್ಯಾಟಲೈಟ್​ ಬಸ್​'ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶಕ್ಕೆ ಹೋಗಿ ಈ ಉಪಗ್ರಹಗಳನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಮತ್ತು ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲು ಉಪಗ್ರಹಗಳ ಮಾಹಿತಿಯಿಂದ ತುಂಬಿರುವ ವಿಶೇಷ 'ಸ್ಯಾಟಲೈಟ್​ ಬಸ್​' ಅನ್ನು ಶಾಲಾ ಆವರಣಕ್ಕೆ ತರಲಾಗಿತ್ತು.

ಬಾಹ್ಯಾಕಾಶ ನಿಲ್ದಾಣದ ಕುರಿತು ವಿವರಿಸಿ, ಅಲ್ಲಿ ಮನೆ ಕಟ್ಟುವುದು ಎಂದರೆ ಭೂಮಿಯ ಮೇಲೆ ಸಿಮೆಂಟ್​, ಇಟ್ಟಿಗೆ ಬಳಸಿ ಕಟ್ಟಡ ಕಟ್ಟಿದಂತಲ್ಲ. ಅದು ಬಾಹ್ಯಾಕಾಶದಲ್ಲಿ ತೇಲುವ ಒಂದು ತಾಂತ್ರಿಕ ವಸತಿ ಕೇಂದ್ರ. ಸದ್ಯ ಭಾರತವು ತನ್ನದೇ ಆದ 5 ಪ್ರಮುಖ ಉಪಗ್ರಹಗಳನ್ನು ಹೊಂದಿದ್ದು, ಇವು ಭೂಮಿಯ ಸುತ್ತ ನಿರಂತರವಾಗಿ ತಿರುಗುತ್ತಾ ನಮಗೆ ಮಾಹಿತಿಯನ್ನು ಒದಗಿಸುತ್ತಿವೆ ಎಂದರು.
ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳಾದ ರವಿ, ಸುನಿತಾ, ಧನುಷ್​, ಶಾಲೆ ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಸ್ಯಾಟಲೈಟ್​ ಬಸ್​ ಒಳಗೆ ತೆರಳಿ ವಿಜ್ಞಾನದ ವಿಸ್ಮಯಗಳನ್ನು ವೀಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net