

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕೆಂಪೇಗೌಡನಗರದಲ್ಲಿರುವಉದಯಭಾನು ಕಲಾಸಂಘದ ವಜ್ರಮಹೋತ್ಸವವರ್ಷಾಚರಣೆಯ ಸಂದರ್ಭದಲ್ಲಿಬುಧವಾರ 15 ದಿನಗಳಚೈತ್ರದ ಚಿಗುರು ಬೇಸಿಗೆ ಶಿಬಿರಕ್ಕೆಚಾಲನೆ ದೊರೆಯಿತು.
ಬೆಳಗ್ಗೆ9.30ಕ್ಕೆಹಮ್ಮಿಕೊಳ್ಳಲಾಗಿದ್ದ ಉದ್ಘಾಟನಾಸಮಾರಂಭದಲ್ಲಿ ರಂಗಕರ್ಮಿ ಹಾಗೂಬರಹಗಾರ್ತಿ ನಾಗವೇಣಿ ರಂಗನ್ಶಿಬಿರಕ್ಕೆ ಚಾಲನೆ ನೀಡಿದರು.ಮುಖ್ಯ ಅತಿಥಿಗಳಾಗಿಶಿಕ್ಷಣ ತಜ್ಞೆ ಮೀರಾ ಮುಕುಂದ್ಭಾಗವಹಿಸಿದ್ದರು.
ಪ್ರತಿದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ1 ಗಂಟೆಯವರೆಗೆ ನಡೆಯುವ ಶಿಬಿರದಲ್ಲಿಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿಆಸಕ್ತಿ ಮೂಡಿಸುವ ಉದ್ದೇಶದಿಂದಕಲೆ, ಸಾಹಿತ್ಯ,ಸಂಸ್ಕೃತಿ,ಸಂಗೀತ,ಕ್ರೀಡೆಯ ಬಗ್ಗೆಹೇಳಿಕೊಡಲಾಗುತ್ತದೆ.ಮಕ್ಕಳಲ್ಲಿಸ್ಪರ್ಧಾತ್ಮಕ ಭಾವನೆ ಬೆಳೆಸುವಉದ್ದೇಶದಿಂದ ಹಲವು ಸ್ಪರ್ಧೆಗಳನ್ನುನಡೆಸಲಾಗುತ್ತದೆ.ವಿಜೇತ ಮಕ್ಕಳಿಗೆಮೇ1ರಂದುನಡೆಯುವ ಸಮಾರೋಪ ಸಮಾರಂಭದಲ್ಲಿಪ್ರಶಸ್ತಿ ವಿತರಿಸಲಾಗುತ್ತದೆಎಂದು ಕಾರ್ಯಕ್ರಮದ ಸಂಯೋಜಕಿಸುಗುಣ ಎಸ್.ಚಂದ್ರತಿಳಿಸಿದ್ದಾರೆ.