ಸಿಇಟಿ ಅರ್ಜಿ ಸಲ್ಲಿಕೆ: ಪಿಯು ಕಾಲೇಜು ವಿಜ್ಞಾನ ಉಪನ್ಯಾಸಕರಿಗೆ ತರಬೇತಿ

ಪಿಯು ಕಾಲೇಜು ವಿಜ್ಞಾನ ಉಪನ್ಯಾಸಕರಿಗೆ ತರಬೇತಿ
ಪಿಯು ಕಾಲೇಜು ವಿಜ್ಞಾನ ಉಪನ್ಯಾಸಕರಿಗೆ ತರಬೇತಿ
Published on

ಪ್ರಮುಖ ಮುಖ್ಯಾಂಶಗಳು

  • ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ವಿಜ್ಞಾನ ಶಿಕ್ಷಕರಿಗೆ ತರಬೇತಿ
  • ಹಿಂದಿನ ವರ್ಷಗಳಲ್ಲಿ ಅರ್ಜಿ ಭರ್ತಿ ಮಾಡುವಾಗ ಅನೇಕ ತಪ್ಪುಗಳಾಗಿರುವುದು ಕಂಡುಬಂದಿವೆ
  • ವಿಜ್ಞಾನ ವಿಭಾಗದ ಉಪನ್ಯಾಸಕರಿಗೆ ಅರ್ಜಿ ಭರ್ತಿ ಮಾಡುವ ಕುರಿತು ಆನ್‌ಲೈನ್ ಮೂಲಕ ಜ.14ರವರೆಗೆ ತರಬೇತಿ
ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜ.17ರಿಂದ ಆರಂಭವಾಗಲಿದ್ದು, ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.
ಅರ್ಜಿಯಲ್ಲಿ ನೀಡಿರುವ ಮಾಹಿತಿಯನ್ನು ಆಧರಿಸಿಯೇ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ನಡೆಸುವುದರಿಂದ ವಿದ್ಯಾರ್ಥಿಗಳು ಸರಿಯಾಗಿ ಅರ್ಜಿ ಭರ್ತಿ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೈಬರ್ ಕೇಂದ್ರಗಳ ಮೇಲೆ ಅವಲಂಬಿತವಾಗುವುದರಿಂದ ಹಿಂದಿನ ವರ್ಷಗಳಲ್ಲಿ ಅರ್ಜಿ ಭರ್ತಿ ಮಾಡುವಾಗ ಅನೇಕ ತಪ್ಪುಗಳಾಗಿರುವುದು ಕಂಡುಬಂದಿವೆ. ಇದರಿಂದ ಕೌನ್ಸೆಲಿಂಗ್ ಸಮಯದಲ್ಲಿ ತೊಂದರೆ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ.
ಈ ಹಿನ್ನೆಲೆಯಲ್ಲಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಿಗೆ ಅರ್ಜಿ ಭರ್ತಿ ಮಾಡುವ ಕುರಿತು ಆನ್‌ಲೈನ್ ಮೂಲಕ ಜ.14ರವರೆಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಉಪನ್ಯಾಸಕರು ತಮ್ಮ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕ ಭರತ್ ತಿಳಿಸಿದ್ದಾರೆ.
ಆನ್‌ಲೈನ್ ತರಬೇತಿ ನೀಡುವ ಬಗ್ಗೆ ಜಿಲ್ಲಾವಾರು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವೀಡಿಯೋ ಕಾನ್ಫೆರೆನ್ಸ್‌ನ ಲಿಂಕ್‌ಅನ್ನು ಕೂಡ ಕಳುಹಿಸಲಾಗಿದೆ. ಇದನ್ನು ನೋಡಿ ತರಬೇತಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net