ಇದಕ್ಕೆ ಪ್ರತಿಕ್ರಿಯಿಸಿದ ಎ್ಆರ್ಆರ್ಒ ಪರ ವಕೀಲರು, ಅರ್ಜಿದಾರರು ವಿದ್ಯಾರ್ಥಿ ವೀಸಾದ ಮೂಲಕ ಬಂದಿದ್ದಾರೆ. ನಿಯಮಗಳ ಮೂಲಕ ವಿದ್ಯಾರ್ಥಿ ವೀಸಾದಲ್ಲಿ ಬಂದಿರುವ ವಿದೇಶಿಯರು ಆರ್ಥಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ಅರ್ಜಿದಾರರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪೊಲೀಸ್ ತಪಾಸಣೆ ವೇಳೆ ಪತ್ತೆಯಾಗಿದೆ. ಆದ್ದರಿಂದ, ವೀಸಾವನ್ನು ವಿಸ್ತರಿಸಲಾಗಿದ್ದರೂ ಕೂಡ, ನಿಯಮ ಉಲ್ಲಂಘಿಸಿದರೆ ಯಾವುದೇ ಕಾರಣ ನೀಡದೆ ಅದನ್ನು ರದ್ದುಪಡಿಸಿ, ಲೀವ್ ಇಂಡಿಯಾ ನೋಟಿಸ್ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ವಾದಿಸಿದರು. ಈ ವಾದ ಪರಿಗಣಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿತು.