ರಾಯರ ಪಟ್ಟಾಭಿಷೇಕ ಮಹೋತ್ಸವ ಸಂಭ್ರಮ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಧಿಕಾರ ದಿನದ ಅಂಗವಾಗಿ ಗುರುವಾರ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಾಯರ ಮೂಲ ಪಾದುಕೆಗಳಿಗೆ ಮುತ್ತುರತ್ನ ಕನಕಾಭಿಷೇಕ ನೆರವೇರಿಸಿದರು.
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಧಿಕಾರ ದಿನದ ಅಂಗವಾಗಿ ಗುರುವಾರ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಾಯರ ಮೂಲ ಪಾದುಕೆಗಳಿಗೆ ಮುತ್ತುರತ್ನ ಕನಕಾಭಿಷೇಕ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಯರ ಪಾದುಕೆಯಿರಿಸಿ ಸ್ವರ್ಣ ರಥೋತ್ಸವ
  • ಭಕ್ತಿ ಭಾವದಲ್ಲಿ ಮೈಮರೆತ ಭಕ್ತರು

ರಾಯಚೂರು

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರು ರಾಘವೇಂದ್ರತೀರ್ಥರ 405 ನೇ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಬೆಳಗ್ಗೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಪಾದುಕಾ ಪೂಜೆ ನೆರವೇರಿಸಿ, ಕನಕ, ಮುತ್ತು, ರತ್ನಗಳ ಅಭಿಷೇಕ ನೆರವೇರಿಸಿ ಶಿರದಲ್ಲಿ ಪಾದುಕೆಗಳನ್ನು ಇರಿಸಿಕೊಂಡು ಭಕ್ತಿ ಸಮರ್ಪಿಸಿದರು.

ನಂತರ ಪೀಠಾಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು ಶ್ರೀಮಠದ ಪ್ರಾಕಾರದಲ್ಲಿ ಶ್ರೀರಾಯರ ಪಾದುಕೆಯಿರಿಸಿ ಸ್ವರ್ಣ ರಥೋತ್ಸವಕ್ಕೆ ಚಾಲನೆ ನೀಡಿ ನಂತರ ಆಶೀರ್ವಚನ ನೀಡಿದರು, ನಮ್ಮ ನಿಮ್ಮೆಲ್ಲರ ಆರಾಧ್ಯ ದೈವ ಶ್ರೀಗುರು ರಾಘವೇಂದ್ರ ಸ್ವಾಮಿಗಳಿಗೆ ಪಟ್ಟಾಭಿಷೇಕ ಮಾಡಿದ ದಿನಾವಾಗಿದೆ. ರಾಯರು ವಿದ್ಯಾ, ಆಚಾರ,ವೈಚಾರದಲ್ಲಿ ಪಾರಪತ್ಯ ಪಡೆಯುವುದರ ಜತೆಗೆ ಅನೇಕ ಗ್ರಂಥಗಳನ್ನು ರಚನೆ ಮಾಡಿದ್ದಾರೆ.

ರಾಯರ ಪಟ್ಟಾಭಿಷೇಕ ಸಂಸ್ಕರಣೆಗೋಸ್ಕರವಾಗಿ ಪ್ರತಿ ವರ್ಷ ಫಾಲ್ಗುಣ ಶುಕ್ಲ ದ್ವಿತೀಯ ದಿನದಂದು ಪಟ್ಟಾಭಿಷೇಕ ಮಹೋತ್ಸವವನ್ನು ಶ್ರೀಮಠದ ಪರಂಪರಗತವಾಗಿ ಆಚರಣೆ ಮಾಡಲಾಗುತ್ತಾದೆ. ಸುವರ್ಣ ಸಿಂಹಾಸನದಲ್ಲಿ ಇರಿಸಿದ

ಶ್ರೀಗುರು ರಾಯರ ಪಾದಗಳು ಕಲ್ಪವೃಕ್ಷದಂತೆ. ನಾವು ಬೇಡಿದ ಇಷ್ಟಾರ್ಥಗಳನ್ನು ಪೂರ್ಣಗೊಳಿಸುವ ಶಕ್ತಿ ಈ ಪವಿತ್ರ ಪಾದಗಳಿಗಿರುವುದರಿಂದ ಪಟ್ಟಾಭಿಷೇಕ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್, ವೆಂಕಟೇಶ್ ಜ್ಯೋಶಿ, ಗೌತಮಾಚಾರ್ಯ, ಮಾಧವಶೆಟ್ಟಿ, ಐ.ಪಿ.ನರಸಿಂಹಮೂರ್ತಿ ಸೇರಿ ಅನೇಕರು ಇದ್ದರು.

((ಭಕ್ತಿ ಭಾವ ಮೆರೆದ ಭಕ್ತರು))
ಈ ಬಾರಿ ಪಟ್ಟಾಭಿಷೇಕ ಮಹೋತ್ಸವವು ಗುರುವಾರ ಆಚರಣೆ ಮಾಡಲಾಗಿದ್ದರಿಂದ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ನದಿ ಪಾತ್ರದ ಪಕ್ಕದಲ್ಲಿ ನಿರ್ಮಾಣ ಮಾಡಿದ ಶವರ್‌ನಲ್ಲಿ ಪುಣ್ಯ ಸ್ನಾನ ಮಾಡಿ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ಶ್ರೀರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿದ ಶ್ರೀಗಳು ಭಕ್ತರಿಗೆ ಫಲ ಮಂತಾಕ್ಷತೆ ನೀಡಿ ಹರಸಿದರು. ಭಕ್ತರು ಪಟ್ಟಾಭಿಷೇಕ ಮಹೋತ್ಸ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net