ಯರಬಳ್ಳಿಯಲ್ಲಿ ಕತ್ತೆಗಳ ಮದುವೆ ಸಂಭ್ರಮ Donkey marriage

ಗುಬ್ಬಿ Donkey marriage ತಾಲೂಕಿನ ಹಾಗಲವಾಡಿ ಹೋಬಳಿಯ ಯರಬಳ್ಳಿಯಲ್ಲಿ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.
ಗುಬ್ಬಿ Donkey marriage ತಾಲೂಕಿನ ಹಾಗಲವಾಡಿ ಹೋಬಳಿಯ ಯರಬಳ್ಳಿಯಲ್ಲಿ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.
Published on
ಎಂ.ಎನ್​.ಕೋಟೆ: ಮಳೆ ಇಲ್ಲದೆ ಕಂಗಾಲಾಗಿರುವ ಗುಬ್ಬಿ ತಾಲೂಕಿನ ಹಾಗಲವಾಡಿ Donkey marriage ಹೋಬಳಿಯ ಯರಬಳ್ಳಿಯ ರೈತರು,ಯಾವ ಮದುವೆಗೂ ಕಡಿಮೆ ಇಲ್ಲವೆಂಬಂತೆ ಕತ್ತೆ ಅದ್ದೂರಿ ಮದುವೆ ಮಾಡಿ ವರುಣ ದೇವರನ್ನು ಪ್ರಾರ್ಥಿಸಿದರು.
ಕಳೆದ ಐದಾರು ತಿಂಗಳಿನಿಂದ ಮಳೆಗಾಗಿ ನಿತ್ಯ ಆಕಾಶ ನೋಡುತ್ತಿರುವ ಜನರಿಗೆ ವರುಣ ದೇವನ ಕೃಪೆ ಇಲ್ಲದೆ ನಿರಾಸೆಯಾಗಿತ್ತು. ಮಳೆ ಇಲ್ಲದೆ ಭೂಮಿ ಭಣಗುಡುತ್ತಿದೆ. ತೆರೆದ ಬಾವಿ, ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ಸಾಂಪ್ರದಾಯಿಕ ಆಚರಣೆ ಹಿನ್ನೆಲೆ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಯರಬಳ್ಳಿ ಜನರು ಒಂದು ವಾರದ ಮುಂಚೆಯೇ ಕತ್ತೆಗಳ ಮದುವೆಗೆ ಸಜ್ಜಾಗಿದ್ದರು. ಗಂಡು ಕತ್ತೆ ಹಾಗೂ ಹೆಣ್ಣು ಕತ್ತೆಗಳನ್ನು ಕರೆತಂದು ಗಂಡು ಕತ್ತೆಗೆ ಹೊಸ ಪಂಚೆ, ಟವೆಲ್​ ಹಾಗೂ ಹೆಣ್ಣು ಕತ್ತೆಗೆ ಹೊಸ ಹಸಿರು ಸೀರೆ, ಬಾಳೆಗಳನ್ನು ತೋಡಿಸಲಾಗಿತ್ತು. ಗಂಡು ಹಾಗೂ ಹೆಣ್ಣು ಕತ್ತೆಗಳಿಗೆ ಬಾಸಿಂಗ ಕಟ್ಟಿ ಸಿಂಗರಿಸಲಾಗಿತ್ತು. ಗ್ರಾಮದ ಹಿರಿಯರಲ್ಲಿ ಎರಡು ಗುಂಪು ಮಾಡಿ ಗಂಡಿನ ಪರ ಹಾಗೂ ಹೆಣ್ಣಿನ ಕಡೆ ಇನ್ನೊಂದು ತಂಡದವರು ನಿಂತಿದ್ದರು.
ಗ್ರಾಮದಲ್ಲಿ ಮದುವೆ ಮಂತ್ರ ಹೇಳುತ್ತಿದ್ದಂತೆ, ಗಟ್ಟಿಮೇಳದೊಂದಿಗೆ ಜನರೆಲ್ಲ ಅಕ್ಷತೆಯ ಮಳೆಗೈದರು. ಕೆಲ ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು. ನವ ಜೋಡಿಗಳಿಗೆ ಮುತೆದೆಯರು ಸೋಬಾನೆ ಪದ ಹೇಳಿ ಆರತಿ ಮಾಡಿ ಹರಸಿದರು. ಸಿಹಿಯೂಟದ ಭರ್ಜರಿ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಖರ್ಚಿಗಾಗಿ ಗ್ರಾಮದ ಎಲ್ಲ ಸಮಾಜದ ಜನರು ಕಾಣಿಕೆ ನೀಡಿದ್ದು ವಿಶೇಷವಾಗಿತ್ತು.
ಇದೇವೇಳೆ, ಮಳೆ ಸುರಿಯಲಿ, ಎಲ್ಲೆಡೆ ಹಸಿರು ಹಬ್ಬಲಿ ಎಂದು ವರುಣದೇವನಲ್ಲಿ ಜನರು ಭಕ್ತಿಯಿಂದ ಪ್ರಾರ್ಥಿಸಿದರು.
ಮಳೆ ಇಲ್ಲದೆ ಕಂಗಾಲಾಗಿರುವ ರೈತರು ಒಂದೆಡೆ ಸೇರಿ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ಸಾಂಪ್ರದಾಯಿಕ ಆಚರಣೆಯನ್ನು ಹಿರಿಯರು, ಊರಿನ ಗ್ರಾಮಸ್ಥರು ನಂಬಿದ್ದರಿಂದ ಎಲ್ಲರೂ ಸೇರಿ ಕತ್ತೆಗಳ ಮದುವೆ ಮಾಡಿದ್ದೇವೆ. ಮಳೆ ಬರುತ್ತದೆಎಂಬ ನಂಬಿಕೆಯಿಂದ ಮದುವೆ ಮಾಡಿ ಊರಿನ ಎಲ್ಲರಿಗೂಊಟದ ವ್ಯವಸ್ಥೆ ಮಾಡಲಾಗಿದೆ.
ಚನ್ನಬಸವರಾಜು ಗ್ರಾಪಂ ಸದಸ್ಯ, ಯರಬಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net