ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಿ

ದೇವರಹಿಪ್ಪರಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಸಚಿನ ಆಲಮೇಲಕರ ಮಾತನಾಡಿದರು. ಮಹಿಬೂಬ ಹುಂಡೇಕಾರ, ಶಂಕರಗೌಡ ಪಾಟೀಲ, ಬಸವರಾಜ ದೇವಣಗಾಂವ ಇದ್ದರು.
ದೇವರಹಿಪ್ಪರಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಸಚಿನ ಆಲಮೇಲಕರ ಮಾತನಾಡಿದರು. ಮಹಿಬೂಬ ಹುಂಡೇಕಾರ, ಶಂಕರಗೌಡ ಪಾಟೀಲ, ಬಸವರಾಜ ದೇವಣಗಾಂವ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಸ್‌ಐ ಸಚಿನ ಆಲಮೇಲಕರ ಹೇಳಿಕೆ
  • ಬಕ್ರೀದ್ ನಿಮಿತ್ತ ಸಭೆ ಆಯೋಜನೆ
ದೇವರಹಿಪ್ಪರಗಿ : ಪ್ರತಿಯೊಂದು ಹಬ್ಬ ಹರಿದಿನಗಳನ್ನು ಎಲ್ಲರೂ ಕೂಡಿ ಸಹೋದರತ್ವ ಭಾವನೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯಿಂದ ಆಚರಿಸಬೇಕು ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆ ಪಿಎಸ್‌ಐ ಸಚಿನ ಆಲಮೇಲಕರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಬಕ್ರೀದ್ ಹಬ್ಬದ ನಿಮಿತ್ತ ಹಮ್ಮಿಕೊಂಡ ಶಾಂತಿ ಸಭೆ ನೇತೃತ್ವ ವಹಿಸಿ ಮಾತನಾಡಿದ ಅವರು, ಪಟ್ಟಣ ಯಾವಾಗಲೂ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಯಾವುದೇ ಭೇದಭಾವವಿಲ್ಲದೆ ಹಬ್ಬಗಳನ್ನು ಆಚರಿಸುತ್ತ ಬಂದಿರುವುದು ಸಂಪ್ರದಾಯ. ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಹಬ್ಬದ ದಿನ ಶಾಂತಿ ಕಾಪಾಡಬೇಕು. ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ, ಪೊಲೀಸ್ ಬಂದೋಬಸ್ತ್ ನಡೆಸಲಾಗುತ್ತಿದೆ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಮಹಿಬೂಬ ಹುಂಡೇಕಾರ, ಶಂಕರಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಎಲ್ಲ ಸಮುದಾಯದವರು ಸಹೋದರರಂತೆ ಇದ್ದೇವೆ. ಹಬ್ಬ ಹರಿದಿನಗಳಲ್ಲಿಯೂ ಸಹ ಎಲ್ಲರೂ ಪರಸ್ಪರ ಸೌರ್ಹಾರ್ದತೆಯಿಂದ ಹಬ್ಬ ಆಚರಿಸುತ್ತಿದ್ದೇವೆ ಎಂದರು.
ಬಸವರಾಜ ದೇವಣಗಾಂವ, ಪ್ರಕಾಶ ಮಲ್ಹಾರಿ, ಶಬ್ಬಿರ ಮುಲ್ಲಾ, ಅಜೀಜ ಯಲಗಾರ, ಮುನ್ನಾ ಮಳಖೇಡ, ಕಾಸು ಜಮಾದಾರ, ಕಾಶೀನಾಥ ಬಜಂತ್ರಿ, ತಾರಾಸಿಂಗ ರಾಠೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net