ಮೇ 1ರಂದು ಶಿಸ್ತುಬದ್ಧವಾಗಿ ಬುದ್ಧ ಜಯಂತಿ ಆಚರಿಸಿ

ಸುರಪುರ ತಹಸಿಲ್​ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಬುದ್ಧ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಎಚ್​.ಎ.ಸರಕಾವಸ್​ ಮಾತನಾಡಿದರು. ವೆಂಕಟೇಶ ಹೊಸಮನಿ, ಮಾಳಪ್ಪ ಕಿರದಳ್ಳಿ, ತಿಪ್ಪಣ್ಣ ಶೆಳ್ಳಗಿ, ಮಹಾದೇವ ಚಲುವಾದಿ, ರಾಜು ಬಡಿಗೇರ, ರಮೇಶ ಬಡಿಗೇರ, ಶರಣಬಸಪ್ಪ, ರಾಜು, ಕೆಂಚಪ್ಪ ಕಟ್ಟಿಮನಿ, ಬಸವರಾಜ ಶಖಾಪುರ ಇತರರಿದ್ದರು.
ಸುರಪುರ ತಹಸಿಲ್​ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಬುದ್ಧ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಎಚ್​.ಎ.ಸರಕಾವಸ್​ ಮಾತನಾಡಿದರು. ವೆಂಕಟೇಶ ಹೊಸಮನಿ, ಮಾಳಪ್ಪ ಕಿರದಳ್ಳಿ, ತಿಪ್ಪಣ್ಣ ಶೆಳ್ಳಗಿ, ಮಹಾದೇವ ಚಲುವಾದಿ, ರಾಜು ಬಡಿಗೇರ, ರಮೇಶ ಬಡಿಗೇರ, ಶರಣಬಸಪ್ಪ, ರಾಜು, ಕೆಂಚಪ್ಪ ಕಟ್ಟಿಮನಿ, ಬಸವರಾಜ ಶಖಾಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಸರಕಾವಸ್​ ಸೂಚನೆ
  • ಸುರಪುರ ತಹಸಿಲ್​ ಕಚೇರಿಯಲ್ಲಿ ಪೂರ್ವಭಾವಿ ಸಭೆ
ಸುರಪುರ: ಎಲ್ಲ ಸರ್ಕಾರಿ ಕಚೇರಿ, ಶಾಲಾ&ಕಾಲೇಜು, ಗ್ರಾಪಂ, ಅಂಗನವಾಡಿ, ಆರೋಗ್ಯ ಕೇಂದ್ರಗಳಲ್ಲಿ ಮೇ 1ರಂದು ಭಗವಾನ್​ ಬುದ್ಧ ಜಯಂತಿ ಶಿಸ್ತುಬದ್ಧವಾಗಿ ಮತ್ತು ಶ್ರದ್ಧಾ&ಭಕ್ತಿಯಿಂದ ಆಚರಣೆ ಮಾಡಬೇಕು ಎಂದು ತಹಸೀಲ್ದಾರ್​ ಎಚ್​.ಎ.ಸರಕಾವಸ್​ ಹೇಳಿದರು.
ಬುದ್ಧ ಜಯಂತಿ ಕುರಿತು ತಹಸಿಕಲ್​ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇ 1ರಂದು ರಜೆ ಇದ್ದರೂ ಸಹ ಬುದ್ಧ ಜಯಂತಿ ಕಡ್ಡಾಯವಾಗಿ ಆಚರಿಸಬೇಕು. ರಜೆ ನೆಪ ಹೇಳಿ ಅಥವಾ ಇನ್ನಿತರ ಕಾರಣ ನೀಡಿ ಆಚರಣೆಯಿಂದ ದೂರ ಉಳಿಯುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಲ್ಲ ಸರ್ಕಾರಿ ಇಲಾಖೆಗಳು, ತಾಲೂಕು ಕಚೇರಿಗಳಲ್ಲಿ ಅಂದು ಬೆಳಗ್ಗೆ 8.30ಕ್ಕೆ ಬುದ್ಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಬೇಕು. ಮೇಣದ ಬತ್ತಿ ಬೆಳಗಿಸಬೇಕು. ತಾಲೂಕು ಆಡಳಿತದಿಂದ ನಗರದ ಗೋಲ್ಡನ್​ ಕೇವ್​ ಬುದ್ಧ ವಿಹಾರದಲ್ಲಿ ಅಂದು ಬೆಳಗ್ಗೆ 9ಕ್ಕೆ ವಿಶೇಷ ನಮನ ಸಲ್ಲಿಸಲಾಗುವುದು. ನಂತರ ತಹಸೀಲ್ದಾರ್​ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಜಯಂತಿ ಏರ್ಪಡಿಸಲಾಗಿದೆ. ವಿಷಯ ತರಿಂದ ಭಗವಾನ್​ ಬುದ್ಧರ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಈ ಜಯಂತ್ಯುತ್ಸವದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಭಾಗವಹಿಸಬೇಕು ಎಂದು ತಿಳಿಸಿದರು.
ವೆಂಕಟೇಶ ಹೊಸಮನಿ, ಮಾಳಪ್ಪ ಕಿರದಳ್ಳಿ, ತಿಪ್ಪಣ್ಣ ಶೆಳ್ಳಗಿ, ಮಹಾದೇವ ಚಲುವಾದಿ, ರಾಜು ಬಡಿಗೇರ, ರಮೇಶ ಬಡಿಗೇರ, ಶರಣಬಸಪ್ಪ, ರಾಜು, ಕೆಂಚಪ್ಪ ಕಟ್ಟಿಮನಿ, ಬಸವರಾಜ ಶಖಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net