ಈ ಭಾಗದಲ್ಲಿ ಈಗಾಗಲೇ ಚರಂಡಿ ದುರಸ್ತಿ ಕಾರ್ಯ ನಡೆದಿದ್ದು, ಅದರ ಮೇಲ್ಭಾಗದಲ್ಲಿ ಸ್ಲಾ$್ಯಬ್ ಅಳವಡಿಸಿ ಕಾಂಕ್ರಿಟ್ ಹಾಕಬೇಕಾಗಿತ್ತು. ಆದರೆ ಕಾಂಕ್ರಿಟ್ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಹೊಸ ಚರಂಡಿಯೊಳಗೆ ತ್ಯಾಜ್ಯ ತುಂಬಿಕೊಂಡಿದೆ. ಕಾಮಗಾರಿ ಶ್ರೀ ಮುಗಿಸುವ ಭರದಲ್ಲಿ ಗುತ್ತಿಗೆದಾರರು ತ್ಯಾಜ್ಯ ತೆರವುಗೊಳಿಸದೆ ನೇರವಾಗಿ ಕಾಂಕ್ರಿಟ್ ಹಾಕಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.