ಸಿಬಿಟಿ ಇಲ್ಲದೇ ಪ್ರಯಾಣಿಕರ ಪರದಾಟ

ಸಿಬಿಟಿ ಬಸ್ ಇಲ್ಲದೇ ಪರದಾಟ
ಸಿಬಿಟಿ ಬಸ್ ಇಲ್ಲದೇ ಪರದಾಟ
Published on

ಪ್ರಮುಖ ಮುಖ್ಯಾಂಶಗಳು

  • ಸಿಬಿಟಿ ಬಸ್ ಇಲ್ಲದೇ ಜನರ ಪರದಾಟ
  • ಚಿಕ್ಕೋಡಿ ,ಅಥಣಿ,ನಿಪ್ಪಾಣಿ ಹೆಚ್ಚಿದ ಸಮಸ್ಯೆ
  • ನಗರ ಸಾರಿಗೆ ಬಸ್ ಆರಂಭಿಸುವಂತೆ ಒತ್ತಾಯ
ಸಿಟಿ ಬಸ್‌ಗಳಿಲ್ಲದೆ ಬಸವಳಿದ ಜನ
ಚಿಕ್ಕೋಡಿ, ನಿಪ್ಪಾಣಿ, ಅಥಣಿಗಳಲ್ಲಿ ಹೆಚ್ಚಿದ ಸಮಸ್ಯೆ, ನಗರ ಸಾರಿಗೆ ಅತ್ಯಗತ್ಯ
ಆನಂದ ಭಮ್ಮನ್ನವರ ಚಿಕ್ಕೋಡಿ
ಚಿಕ್ಕೋಡಿ ಉಪ ವಿಭಾಗದ ಪಟ್ಟಣಗಳು ​​ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಇಲ್ಲಿಯ ವೃದ್ದರಿಗೆ ಮತ್ತು ಮಹಿಳೆಯರಿಗೆ ನಗರ ಸಾರಿಗೆ ಬಸ್‌ಗಳ ಅವಶ್ಯಕತೆ ಇದೆ. ಆದರೆ, ಸಾರಿಗೆ ಇಲಾಖೆ ನಗರ ಸಾರಿಗೆ ಬಸ್‌ಗಳನ್ನು ಪ್ರಾರಂಭಿಸದ ಕಾರಣ ಜನರು ಖಾಸಗಿ ವಾಹನ ಅಥವಾ ಆಟೋಗಳಲ್ಲಿ ದುಬಾರಿ ವೆಚ್ಚ ತೆತ್ತು ಪ್ರಯಾಣಿಸಬೇಕಾಗಿದೆ.
ಜಿಲ್ಲೆಯ ಗಡಿಭಾಗದಲ್ಲಿನ ಚಿಕ್ಕೋಡಿ ವಿಭಾಗವು ಚಿಕ್ಕೋಡಿ, ರಾಯಭಾಗ, ನಿಪ್ಪಾಣಿ, ಅಥಣಿ, ಹುಕ್ಕೇರಿ, ಸಂಕೇಶ್ವರ ಘಟಕಗಳನ್ನು ಒಳಗೊಂಡಿದೆ. ಚಿಕ್ಕೋಡಿ ಒಟ್ಟು 668 ಬಸ್‌ಗಳು ನಿತ್ಯ ಓಡಾಟ ನಡೆಸುತ್ತವೆ. 3.91 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಾರೆ. ಪ್ರಯಾಣಿಕರ ಸಂಖ್ಯೆ ಈಗಿರುವ ಬಸ್‌ಗಳು ಸಾಕಾಗುವುದಿಲ್ಲ. ಇನ್ನು 100ಕ್ಕೂ ಅಧಿಕ ಹೊಸ ಬಸ್‌ಗಳ ಬೇಡಿಕೆಯಿದೆ. ಇಂಥದರಲ್ಲಿ ನಗರ ಸಾರಿಗೆ ಬಸ್‌ಗಳನ್ನು ಆರಂಭಿಸುವುದು ಕಷ್ಟಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-----------
ಬಾಕ್ಸ್...
ತೊಂದರೆ
ಅಥಣಿ, ಚಿಕ್ಕೋಡಿ, ನಿಪ್ಪಾಣಿ ಪಟ್ಟಣದ ಶಾಲೆ-ಕಾಲೇಜುಗಳಿಗೆ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಥಣಿ ಸಮೀಪದ ಕೊಕಟನೂರ ಗ್ರಾಮದಲ್ಲಿ, ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಸ್ತವನಿಧಿ ಬಳಿ ಶಾಲೆ-ಕಾಲೇಜುಗಳಿವೆ. ಆದರೆ, ಹೊರವಲಯದ ಈ ಬಡಾವಣೆಗಳಿಗೆ ತೆರಳಲು ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಕಾಲ್ನಡಿಗೆ, ಆಟೋ ಅಥವಾ ಸ್ವಂತ ವಾಹನ ಅವಲಂಬಿಸುವುದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅನಿವಾರ್ಯವಾಗಿದೆ. ಇದೇ ರೀತಿ ಚಿಕ್ಕೋಡಿ ಹೊರವಲಯದಲ್ಲಿರುವ ಸರ್ಕಾರಿ ಜಿಟಿಸಿ ಕಾಲೇಜು, ಪದವಿ ಕಾಲೇಜು, ವಿದ್ಯಾರ್ಥಿನಿಲಯ, ಡಿಡಿಪಿಐ, ಡಿಡಿಪಿಯು ಕಚೇರಿಗಳಿಗೆ ತೆರಳಲು ನಗರ ಸಾರಿಗೆ ಬಸಗಳಿಲ್ಲ. ಪಟ್ಟಣದ ಬಾಣಂತಿಖೋಡಿಯಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಗೆ ತಲುಪಲು ಆಟೋ ಅಥವಾ ಸ್ವಂತ ವಾಹನ ಅನಿವಾರ್ಯವಾಗಿದೆ.
-----------
ಕೋಟ್...
ಶಾಲೆ-ಕಾಲೇಜುಗಳಿಗೆ ಹೋಗಿ ಬರಲು ಸರಿಯಾದ ಬಸ್ ಇಲ್ಲದೇ ತೊಂದರೆ ಆಗುತ್ತಿದೆ. ಗ್ರಾಮೀಣ ಭಾಗದ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಈ ಭಾಗದ ಅನುಕೂಲವಾಗುವಂತೆ ನಗರದ 10-15 ಕಿ.ಮೀ. ನಗರ ಸಾರಿಗೆ ಬಸ್ಸುಗಳನ್ನು ಪ್ರಾರಂಭಿಸಬೇಕು. ಗ್ರಾಮೀಣ ಸಾರಿಗೆ ಬಸ್ಸುಗಳು ಸರಿಯಾದ ಸಮಯಕ್ಕೆ ಸಂಚರಿಸಲು ಕ್ರಮವಹಿಸಬೇಕು.
ಯಲ್ಲಾಲಿಂಗ ಮಾದರ
ವಿದ್ಯಾರ್ಥಿ, ಯಲ್ಲಮ್ಮವಾಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net