ಅಧಿಕಾರಿಗಳ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ

ವಿಧಾನಸೌಧದಲ್ಲಿ ಮಠಾಧೀಶರನ್ನು ಅಮಾನೀಯವಾಗಿ ನಡೆಸಿಕೊಂಡು ಅವಮಾನ ಮಾಡಿರುವ ಪೊಲೀಸ್​ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಸೇಡಂನಲ್ಲಿ ಪೊಲೀಸ್​ ಉಪ ನಿರೀಕ್ಷಕರಿಗೆ ಮನವಿಪತ್ರ ಸಲ್ಲಿಸಿದರು. ಶರಣು ಮೆಡಿಕಲ್​, ರಾಮು ಕಣೇಕಲ್​ ಇತರರಿದ್ದರು.
ವಿಧಾನಸೌಧದಲ್ಲಿ ಮಠಾಧೀಶರನ್ನು ಅಮಾನೀಯವಾಗಿ ನಡೆಸಿಕೊಂಡು ಅವಮಾನ ಮಾಡಿರುವ ಪೊಲೀಸ್​ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಸೇಡಂನಲ್ಲಿ ಪೊಲೀಸ್​ ಉಪ ನಿರೀಕ್ಷಕರಿಗೆ ಮನವಿಪತ್ರ ಸಲ್ಲಿಸಿದರು. ಶರಣು ಮೆಡಿಕಲ್​, ರಾಮು ಕಣೇಕಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ವಿಧಾನಸೌಧದಲ್ಲಿ ದಲಿತ ಮಠಾಧೀಶರಿಗೆ ಅವಮಾನ
  • ಸೇಡಂನಲ್ಲಿ ಬಿಜೆಪಿ ಆಕ್ರೋಶ
ಸೇಡಂ: ತಮ್ಮ ಕೆಲಸದ ನಿಮಿತ್ತ ಕೋಡ್ಲಾ ಉರಿಲಿಂಗ ಪೆದ್ದೀಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಪೀಠದ ಶ್ರೀ  ಬಸವ ನಾಗಿದೇವ ಸ್ವಾಮೀಜಿ ಅವರು ವಿಧಾನಸೌಧಕ್ಕೆ ತೆರಳಿದಾಗ ಅಲ್ಲಿನ ಪೊಲೀಸ್​ ಸಿಬ್ಬಂದಿ ಶ್ರೀಗಳೊಂದಿಗೆ ಅಮಾನೀಯವಾಗಿ ನಡೆದುಕೊಂಡಿದೆ. ಸರ್ಕಾರ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಒತ್ತಾಯಿಸಿದರು. 
ಇಲ್ಲಿನ ಪೊಲೀಸ್​ ಠಾಣೆ ಉಪ ನಿರೀಕ್ಷಕರಿಗೆ ಗುರುವಾರ ಮನವಿಪತ್ರ ಸಲ್ಲಿಸಿ, ಮಾತೆತ್ತೀದರೆ ನಾವು ಶೋಷಿತರ ಪರವಾಗಿದ್ದೇವೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದ ಸ್ವಾಮಿಗಳಿಗೆ ಒಳ ಬಿಡದೆ ಪೊಲೀಸರು ಅವಮಾನಿಸಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೆ ?. ಇಡೀ ದಲಿತ ಸಮುದಾಯದ ಪ್ರತಿನಿಧಿಯಾಗಿರುವ ಇಬ್ಬರು ಸ್ವಾಮಿಗಳ ಜತೆಗೆ ಕರ್ತವ್ಯನಿರತ ಪೊಲೀಸರು ನಡ್ರೀ ಎನ್ನುವ ದರ್ಪದ ಮಾತುಗಳನ್ನಾಡಿದ್ದಾರೆ. ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ, ಹೀಗಾಗಿ ಅಮಾನೀಯವಾಗಿ ವರ್ತಿಸಿದ ಸಿಬ್ಬಂದಿಯನ್ನು ಗುರುತಿಸಿ 24ಗಂಟೆಗಳಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಸೇಡಂ ಬಂದ್​ ಜತೆಗೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್​, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಪ್ರಧಾನ ಕಾರ್ಯದರ್ಶಿಗಳಾದ ರಾವೇಂದ್ರ ಮೆಕಾನಿಕ್​, ತಿರುಪತಿ ಮದಕಲ್​, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಮು ಕಣೇಕಲ್​, ಪ್ರಧಾನ ಕಾರ್ಯದರ್ಶಿ ವಿಷ್ಣು ಊಡಗಿ, ನಗರಾಧ್ಯಕ್ಷ ಸತೀಶ ಪಾಟೀಲ್​ ತರನಳ್ಳಿ, ಪ್ರಮುಖರಾದ ಶ್ರೀಶೈಲ್​ ಎಂ.ಜಿ, ಸಿದ್ದು ಊಡಗಿ, ಶರಣು ಪಂಚಾಕ್ಷರಿ, ಶಿವಾನಂದಸ್ವಾಮಿ, ಮಲ್ಲಿಕಾರ್ಜುನ ಹುಳಗೋಳ, ಲಕ್ಷ$್ಮಣ ಮಂತ್ರಿ, ಅನಂತಪ್ಪ ಮೋತಕಪಲ್ಲಿ, ಪ್ರಕಾಶ ದೊರೆ, ರವಿನಾಯಕ, ರವೀಂದ್ರ ಭಂಟನಹಳ್ಳಿ, ಸಿದ್ದಲಿಂಗಗೌತಂ, ಸಂದೀಪ ಪ್ಯಾಟಿ, ಅಶೋಕ ಕೊಡದೂರ, ಅಳೆಪ್ಪ ಪೂಜಾರಿ, ರವಿ ಹಾಬಾಳ, ಶ್ರೀಮಂತ ಅವಂಟಿ, ದೇವಿಂದ್ರಪ್ಪ ಕೊಟ್ರಕಿ, ಅನೀಲ್​ ರನ್ನೆಟ್ಲಾ, ರೇವಣಸಿದ್ದ ಬಿರಾದಾರ, ಭೀಮು ನಾಯಕ, ನಿರಂಜನ್​ ರಂಜೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net