ರಸ್ತೆ ಅಫಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದವರ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಧಾವಿಸಿ ಸಮಯಕ್ಕೆ ಸರಿಯಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಐದು ಮಂದಿಯ ಪ್ರಾಣವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
ಕೋಲಾರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ, ಎಸ್ ಡಿ. ಸಿ ಕಾಲೇಜಿನ. ಸರ್ವೀಸ್ ರಸ್ತೆಯಲ್ಲಿ ತಡ ರಾತ್ರಿ ಕೆಂಪು ಬಣ್ಣದ ಕ್ವಾಲೀಸ್ ಕಾರಿನಲ್ಲಿ ಮುಳಬಾಗಿಲು ಕಡೆಯಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳಸಿದ್ದರೂ ಈ ವೇಳೆ ಕೋಲಾರ ಕಡೆಗೆ ಬರಲು ಏಕಾ ಏಕಿ ರಾಷ್ಟ್ರೀಯ ಹೆದ್ದಾರಿ ೭೫ ರಿಂದ ಸರ್ವೀಸ್ ರಸ್ತೆಗೆ ಕಾರನ್ನುತಿರುಗಿಸದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯ ಮರಕ್ಕೆ ಕಾರು ಡಿಕ್ಕಿ ಹೋಡೆದ ಪರಿಣಾಮ ಕಾರು ಸಂಪೂರ್ಣ ಜಕ್ಕಂಗೊAಡು ಕಾರಿನಲ್ಲಿದ್ದವರು ಹೊರಬಾರದ ಸ್ಥಿತಿಯಲ್ಲಿ ಇದ್ದರು.
ಅಪಘಾತ ವಿಷಯ ಹಾಗೂ ಅಲ್ಲಿನ ಗಂಭೀರತೆಯ ವಿಷಯವು ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಕಾಂತರಾಜು ಅವರ ಗಮಕ್ಕೆ ಬಂದ ಕೂಡಲೇ ಅಗ್ನಿ ಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಹನುಮಂತರಾಯ ತಮ್ಮ ಸಿಬ್ಬಂದಿಗಳೊಟ್ಟಿಗೆ ತಕ್ಷಣ ಸ್ಥಳಕ್ಕೆ ದಾವಿಸಿ ಕಾರಿನಲ್ಲಿ ರಕ್ತದ ಮಡುವಿನಲ್ಲಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದವರನ್ನು ಕೆಲವು ಯಂತ್ರೋಪಕರಣಗಳನ್ನು ಬಳಸಿ ಕಾರಿನ ನಾಲ್ಕು ಡೋರ್‌ಗಳನ್ನು ಹೊಡೆದು ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆದು ಆರ್. ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸುವ ಮೂಲಕ ಕಾರಿನಲ್ಲಿದ್ದ ೫ ಮಂದಿಯ ಪ್ರಾಣವನ್ನು ಉಳಿಸಿದ್ದಾರೆ.
ಕಾರಿನಲ್ಲಿ ಒಂಬತ್ತು ವರ್ಷದ ಮಗು ಸೇರಿ ೬ ಮಂದಿ ಪ್ರಯಾಣಿಸುತ್ತಿದ್ದರು ಘಟನೆಯಲ್ಲಿ ಕುಮಾರ್ (೩೫) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಿತ್ಯ (೯)ಸ್ಪೂರ್ತಿ (೨೩), ಸುಕೃತ, (೧೯,) ನಾಗೇಂದ್ರ (೪೨) ಸಮಂತ್ (೨೩) ಅಗ್ನಿಶಾಮಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಶ್ರಮತೆಗೆ ಐದು ಮಂದಿ ಪ್ರಾಣಾಮಯದಿಂದ ಪಾರಾಗಿದ್ದಾರೆ.
ಘಟನೆ ಸಂಬAದ ಕೋಲಾರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆಗ್ನಿ ಶಾಮಕ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ತಡ ರಾತ್ರಿ ಎನ್ನದೆ ಅಫಘಾತ ಘಟನೆಯ ಗಂಬೀರತೆಯನ್ನು ಅರಿತು ಸ್ಥಳಕ್ಕೆ ದಾವಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವರ ರಕ್ಷಣೆ ದಾವಿಸುವ ಮೂಲಕ ಮಾನವೀಯತೆ ಮೆರೆದಿದ್ದು, ಎಲ್ಲೆಡೆ ಪ್ರಶಂಸೆಯ ಮಹಾಪೂರ ಹರಿದು ಬರುತ್ತಿದೆ. ಒಂದು ವೇಳೆ ಅಗ್ನಿ ಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿಗಳು ೨೦ ನಿಮಿಷ ತಡವಾಗಿ ಸ್ಥಳಕ್ಕೆ ದಾವಿಸಿದಿದ್ದರೆ ಕಾರಿನಲ್ಲಿದ್ದ ೬ ಮಂದಿಯೂ ಸಾವನ್ನಪ್ಪುತ್ತಿದ್ದರು ಎನ್ನಲಾಗಿದೆ.